ಪ್ರಧಾನಿಗೆ ಪಶ್ಚಾತ್ತಾಪ ಕಾಡಲಿ ಎಂದು ಫೋಟೊ ಹಂಚಿಕೊಂಡ ನಿಶ್ರಿನ್ ಜಾಫ್ರಿ
ಸೆಲ್ಫಿ ಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ, ಹೆಣ್ಣು ಮಕ್ಕಳನ್ನು ಉಳಿಸಲು ಅರಿವು ಮೂಡಿಸಲು ತಮ್ಮ ಹೆಣ್ಣು ಮಕ್ಕಳ
ಸೆಲ್ಫಿ ಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ, ಹೆಣ್ಣು ಮಕ್ಕಳನ್ನು ಉಳಿಸಲು ಅರಿವು ಮೂಡಿಸಲು ತಮ್ಮ ಹೆಣ್ಣು ಮಕ್ಕಳ ಜೊತೆ ಸೆಲ್ಫಿ ತೆಗೆದು ಟ್ವಿಟ್ಟರ್ ನಲ್ಲಿ ಹಾಕಿ ಎಂಬ ಮನವಿ ವಿಶ್ವದಾದ್ಯಂತ ಟ್ರೆಂಡಿಂಗ್ ಆಗಿತ್ತು. ಹಲವಾರು ಜನ ತಮ್ಮ ಹೆಣ್ಣುಮಕ್ಕಳ ಜೊತೆ ತೆಗೆದು ಹಾಕುತ್ತಿದ್ದ ಫೋಟೋಗಳಲ್ಲಿ ಟ್ವಿಟ್ಟರ್ ತುಂಬಿಹೋಗಿತ್ತು.
ಆದರೆ ಇವರು ಫೇಸ್ಬುಕ್ಕಿನಲ್ಲಿ ಶೇರ್ ಮಾಡಿದ ಒಂದು ಫೋಟೊ ಸಂತಸ ಮೂಡಿಸುವಂತಿತಲಿಲ್ಲ ಬದಲಾಗಿ ೨೦೦೨ ಗುಜರಾತ್ ನರಮೇಧದ ಕಹಿ ನೆನಪುಗಳನ್ನು ನೆಪಸುವ ಆ ಫೋಟೊ ಹಂಚಿಕೊಂಡಿದ್ದು, ೨೦೦೨ ಗುಲ್ಬರ್ಗಾ ಸೊಸೈಟಿ ನರಮೇಧದಲ್ಲಿ ಬರ್ಬರವಾಗಿ ಹತ್ಯೆಯಾದ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಮಗಳು ನಿಶ್ರಿನ್ ಜಾಫ್ರಿ. ಈ ಘಟನೆಯಲ್ಲಿ ಹಿಂದುಗಳ ಗುಂಪು ೬೯ ಮುಸ್ಲಿಮರನ್ನು ಬರ್ಬರವಾಗಿ ಹತ್ಯೆ ಮಾಡಿತ್ತು. ಆಗ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ ಈ ಗಲಭೆಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ದೂರಿದ್ದರು.
ಆದರೆ ವಿಶೇಶ ತನಿಖಾ ದಳ (ಎಸ್ ಐ ಟಿ), ನರೇಂದ್ರ ಮೋದಿ ಆರೋಪಮುಕ್ತ ಎಂದು ತಿಳಿಸಿತ್ತು.
ನಿಶ್ರಿನ್ ಜಾಫ್ರಿ ಅವರು ತಮ್ಮ ತಂದೆ ಎಹ್ಸಾನ್ ಅವರೊಂದಿಗಿನ ಫೋಟೊ ಹಂಚಿಕೊಂಡು, #ಸೆಲ್ಫಿ ವಿತ್ ಡಾಟರ್ ಎಂದು ಹ್ಯಾಶ್ ಟ್ಯಾಗ್ ಮಾಡಿ, ಈ ಚಿತ್ರ ಅವರನ್ನು (ಮೋದಿ) ಕೊನೆಯವರೆಗೂ ಕಾಡುತ್ತದೆ ಎಂದು ಬರೆದಿದ್ದಾರೆ!