ಶ್ರೀಕಾಕುಲಂ: ಬೆಟ್ಟಿಂಗ್ ರ್ಯಾಕೆಟ್ ಆರೋಪದ ಮೇಲೆ ಕಲಾನಿಕೇತನ ಶೋರೂಮ್ ಬಳಿಯ ಮನೆಯೊಂದರಲ್ಲಿ ೮ ಜನ ಬುಕ್ಕಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಮಾಹಿತಿಯೊಂದರ ಜಾಡು ಹತ್ತಿ, ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ನಾರಾಯಣ ಶೆಟ್ಟಿ ವೆಂಕಟ ಕಿರಣ್, ಮಾಣಿಕ್ಯಂ ಸೂರಿಬಾಬು, ಪಶುಮರ್ತಿ ಕೋಟಿ ಬಾಬು, ಮಶುಮರ್ತಿ ಜ್ಯೋತಿ ಬಾಬು, ನಂದಿಗಂ ಶ್ರೀನಿವಾಸ ಪಟ್ನಾಯಕ್, ತಮ್ಮ ರಾಮಂ ಮೂರ್ತಿ, ತಂಕಳ ವೆಂಕಟ ರಮಣ ಮತ್ತು ಸತ್ಯವರಪು ಲವ ಕುಮಾರ್ ಎಂಬುವವರನ್ನು ಕ್ರಿಕೆಟ್ ಪಂದ್ಯ ನೋಡಿಕೊಂಡು ಬೆಟ್ಟಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಒಂದು ಟಿವಿ ಮತ್ತು ೪೯.೮೮೦/- ರೂಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಬೆಟ್ಟಿಂಗ್ ದಂಧೆಗಾಗಿಯೇ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯ ಮೂಲಕ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.