ಉತ್ತರಾಖಂಡದಲ್ಲಿ ಹಿಮಪಾತ: ಇಬ್ಬರು ಸೈನಿಕರ ಸಾವು
ಕಳೆದ ಎರಡು ದಿನಗಳಿಂದ ಅತಿ ಹೆಚ್ಚು ಹಿಮ ಬೀಳುತ್ತಿರುವ ಉತ್ತರಾಖಂಡದ ಪಿತೋರಘರ್ ಜಿಲ್ಲೆಯ ಸೈನ್ಯದ ಚೆಕ್ ಪೋಸ್ಟ್ ಒಂದಕ್ಕೆ ಹಿಮಪಾತ (ಅವಾಲಾಂಚೆ)
ಡೆಹ್ರಾಡೂನ್: ಕಳೆದ ಎರಡು ದಿನಗಳಿಂದ ಅತಿ ಹೆಚ್ಚು ಹಿಮ ಬೀಳುತ್ತಿರುವ ಉತ್ತರಾಖಂಡದ ಪಿತೋರಘರ್ ಜಿಲ್ಲೆಯ ಸೈನ್ಯದ ಚೆಕ್ ಪೋಸ್ಟ್ ಒಂದಕ್ಕೆ ಹಿಮಪಾತ (ಅವಾಲಾಂಚೆ) ಅಪ್ಪಳಿಸಿದ್ದರಿಂದ ಇಬ್ಬರು ಸೈನಿಕರು ಮೃತಪಟ್ಟಿದ್ದು, ಮತ್ತೊಬ್ಬರು ಕಾಣೆಯಾಗಿದ್ದಾರೆ.
ಪಿತೋರಘರ್ ಜಿಲ್ಲಾಧಿಕಾರಿ ಸುಶೀಲ್ ಕುಮಾರ್ ಪ್ರಕಾರ ಸೈಲಕ್ ಗಡಿಯ ಚೆಕ್ ಪೋಸ್ಟ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕುಮಾವ್ ಸ್ಕೌಟ್ಸ್ ರೆಜಿಮೆಂಟ್ ನ ಎಂಟು ಜನ ಸೈನಿಕರನ್ನು ಅಲ್ಲಿ ಗಡಿ ಕಾಯಲು ನೇಮಿಸಲಾಗಿತ್ತು.
"ಇಂಡೋ-ನೇಪಾಳ ಗಡಿಯಲ್ಲಿನ ಈ ಚೆಕ್ ಪೋಸ್ಟ್ ನಲ್ಲಿದ್ದ ೮ ಸೈನಿಕರ ಪೈಕಿ ಇಬ್ಬರು ಮೃತಪಟ್ಟಿದ್ದು, ಒಬ್ಬ ಕಾಣೆಯಾಗಿದ್ದು, ಐವರನ್ನು ರಕ್ಷಿಸಲಾಗಿದೆ"
"ಕಾಣೆಯಾದ ಸೈನಿಕನ ಪತ್ತೆಗೆ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ" ಎಂದು ಕುಮಾರ್ ತಿಳಿಸಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಭಾಗೇಶ್ವರ್ ಜಿಲ್ಲೆಯ ಕಪ್ಕೋತ್ ನಲ್ಲಿ ಭೂಕುಸಿತದಿಂದ ಮನೆಯೊಂದು ಕುಸಿದು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನೆನ್ನೆ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.