ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ನ್ಯಾಚುರೋಪತಿ ಚಿಕಿತ್ಸೆಗೆ ಬೆಂಗಳೂರಿಗೆ ಬಂದಿಳಿದ ಅರವಿಂದ್ ಕೇಜ್ರಿವಾಲ್

ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೧೦ ದಿನಗಳ ಸಮಯಕ್ಕೆ

ಅಪ್ಡೇಟ್: ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೧೦ ದಿನಗಳ ಸಮಯಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಕರ್ನಾಟಕ ಸರ್ಕಾರದ ಶಿಷ್ಟತೆಯ ಪ್ರಕಾರ ನಿಯೋಜಿಸಿದ್ದ ಸರ್ಕಾರಿ ವಾಹನವನ್ನು ಬಳಸದೆ, ಪಕ್ಷದ ಕಾರ್ಯಕರ್ತರ ಖಾಸಗಿ ವಾಹನವೊಂದರಲ್ಲಿ ಚಿಕಿತ್ಸೆಗೆ ತೆರಳಿದ್ದಾರೆ.

ನವದೆಹಲಿ
: ಸಕ್ಕರೆ ಖಾಯಿಲೆ ಮತ್ತು ಕೆಮ್ಮಿಗೆ ನ್ಯಾಚುರೋಪತಿ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ೧೦ ದಿನಗಳ ಸಮಯಕ್ಕೆ ಬೆಂಗಳೂರಿಗೆ ಹೊರಟಿದ್ದಾರೆ.

ತಮ್ಮ ತಂದೆ ತಾಯಿಯ ಜೊತೆ ಕೇಜ್ರಿವಾಲ್ ಗಾಜಿಯಾಬಾದ್ ನ ಕೌಸಂಭಿಯ ತಮ್ಮ ಮನೆಯನ್ನು ೮ ಘಂಟೆಗೆ ಬಿಟ್ಟರು.

ಈ ೧೦ ದಿನಗಳ ಕೇಜ್ರಿವಾಲ್ ಗೈರು ಹಾಜರಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಅವರು ದೆಹಲಿ ಸರ್ಕಾರದ ದಿನಂಪ್ರತಿ ಚಟುವಟಿಕೆಗಳನ್ನು ನೋಡಿಕೊಳ್ಳಲಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಅರವಿಂದ್ ಕೇಜ್ರಿವಾಲ್ ಅವರ ಬಿಡದ ಕೆಮ್ಮಿಗೆ ಚಿಕಿತ್ಸೆ ಪಡೆಯಲು ಬೆಂಗಳೂರಿನ ಯೋಗ ಚಿಕಿತ್ಸಕರನ್ನು ಕಾಣುವಂತೆ ತಿಳಿಸಿದ್ದರು.

ಅರವಿಂದ್ ಅವರ ರಕ್ತದಲ್ಲಿ ಸಕ್ಕರೆ ಅಂಶದ ಪ್ರಮಾಣ ಕಳೆದ ೧೨ ದಿನಗಳಿಂದ ೩೦೦ ಕ್ಕೂ ಹೆಚ್ಚಿದೆ. ಇನ್ಸುಲಿನ್ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿದ್ದರು ಇತರ ಔಷಧದ ಪ್ರಮಾಣವನ್ನು ದುಪ್ಪಟ್ಟು ಹೆಚ್ಚಿಸಿದ್ದರು ಕೆಮ್ಮಿನಲ್ಲಿ ಇಳಿಮುಖ ಕಂಡಿಲ್ಲ ಹಾಗು ಸಕ್ಕರೆ ಅಂಶದ ಪ್ರಮಾಣ ಹೆಚ್ಚಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಕೆಮ್ಮಿನ ಅಲರ್ಜಿ ಇರುವ ಕೇಜ್ರಿವಾಲ್ ಅವರಿಗೆ ವಿಧಾನಸಭೆಯ ಚುನಾವಣೆ ವೇಳೆಯಲ್ಲಿ ಅನಾರೋಗ್ಯ ತೀವ್ರಗೊಂಡಿತ್ತು. ಅನಾರೋಗ್ಯದ ಕಾರಣ ನೀಡಿ ಅವರು ನೆನ್ನೆ ನಡೆದ ಪಕ್ಷದ ರಾಷ್ಟ್ರೀಯ ಸಂಚಾಲಕರ ಸಭೆಯಿಂದ ಹೊರಗುಳಿದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT