ಹೈದರಾಬಾದ್ ನಗರ 
ಪ್ರಧಾನ ಸುದ್ದಿ

ಹೈದರಾಬಾದ್ ಭಾರತದಲ್ಲಿ ಅತ್ಯುತ್ತಮ ವಾಸಯೋಗ್ಯ ನಗರ: ಅಧ್ಯಯನ

ಅತ್ಯುತ್ತಮ ಗುಣಮಟ್ಟದ ವಾಸಕ್ಕೆ, ಭಾರತದ ನಗರಗಳಲ್ಲಿ ಹೈದರಾಬಾದ್ ಮೊದಲ ಸ್ಥಾನ ಪಡೆದಿದೆ.

ಹೈದರಾಬಾದ್: ಅತ್ಯುತ್ತಮ ಗುಣಮಟ್ಟದ ವಾಸಕ್ಕೆ, ಭಾರತದ ನಗರಗಳಲ್ಲಿ ಹೈದರಾಬಾದ್ ಮೊದಲ ಸ್ಥಾನ ಪಡೆದಿದೆ.

ಮರ್ಸರ್ ಗುಣಮಟ್ಟದ ಜೀವನ ೨೦೧೫ ರ ವರದಿಯ ಪ್ರಕಾರ ಹೈದರಾಬಾದ್ ಜಾಗತಿಕವಾಗಿ ೧೩೮ನೆ ಸ್ಥಾನದಲ್ಲಿದ್ದು, ಭಾರದಲ್ಲಿ ಪುಣೆ, ಬೆಂಗಳೂರು, ಮುಂಬೈ ಮತ್ತು ನವದೆಹಲಿಯನ್ನು ಹಿಂದಿಕ್ಕಿ ಅತುತ್ತಮ ವಾಸಯೋಗ್ಯ ನಗರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಈ ಅಧ್ಯಯನ ಸೂಚಿಸುವುದೇನೆಂದರೆ, ವಾಸ್ತವ್ಯದ ಗುಣಮಟ್ಟದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಜಾಕತಿಕವಾಗಿ ಭಾರತದ ನಗರಗಳಲ್ಲಿ ಯಾವುದೇ ಬದಾಲಾವಣೆ ಇಲ್ಲ. ಅಂತರಾಷ್ಟ್ರೀಯ ಶಾಲೆಗಳು ಮತ್ತು ಶ್ರೇಷ್ಠ ಇಂಗ್ಲಿಶ್ ಸ್ಪೀಕಿಂಗ್ ಶಾಲೆಗಳು ಹೆಚ್ಚಿರುವುದರಿಂದ ಹೈದರಾಬಾದ್ ಮೇಲೆ ಬಂದಿದೆ ಎನ್ನಲಾಗಿದೆ.

ಅಲ್ಲದೆ ನಗರದಿಂದ ೨೨ ಕಿ ಮೀ ದೂರದಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸುಸಜ್ಜಿತವಾಗಿದ್ದು, ಹಲವಾರು ಅಂತರಾಷ್ಟ್ರೀಯ ವಿಮಾನಗಳ ಸೌಲಭ್ಯ ಹೊಂದಿದೆ.

ಜಾಗತಿಕವಾಗಿ ಪುಣೆ (೧೪೫), ಬೆಂಗಳೂರು (೧೪೬), ಚೆನ್ನೈ (೧೫೧), ಮುಂಬೈ (೧೫೨), ನವದೆಹಲಿ (೧೫೪), ಕೋಲ್ಕತ್ತಾ (೧೬೦) ಸ್ಥಾನ ಪಡೆದ ನಗರಗಳು.

ವಿಶ್ವದಲ್ಲೇ ಅತಿ ಹೆಚ್ಚಿನ ಗುಣಮಟ್ಟದ ವಾಸಯೋಗ್ಯ ನಗರವಾಗಿ ವಿಯೆನ್ನಾ ಸ್ಥಾನ ಪಡೆದಿದೆ. ಇತರ ಯೂರೋಪಿಯನ್ ನಗರಗಳು ಕೂಡ ಮೂಂಚೂಣಿಯಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!