ಪ್ರಧಾನ ಸುದ್ದಿ

ಹುರಿಯತ್ ತೀವ್ರಗಾಮಿ ಮಸ್ರತ್ ಅಲಂನನ್ನು ಬಂಧನಮುಕ್ತಗೊಳಿಸಲು ಜಮ್ಮು ಕಾಶ್ಮೀರ ಸರ್ಕಾರ ಸಿದ್ಧತೆ

Guruprasad Narayana

ಜಮ್ಮು: ೨೦೦೮ ಮತ್ತು ೨೦೧೦ರಲ್ಲಿ ಕಲ್ಲೆಸೆಯುವ ಪ್ರತಿಭಟನೆಗೆ ಚಾಲನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಹುರಿಯತ್ ನ ತೀವ್ರಗಾಮಿ ಗುಂಪಿನ ನಾಯಕ ಮಸ್ರತ್ ಆಲಂನನ್ನು ಬಿಡುಗಡೆ ಮಾಡಲು ಜಮ್ಮು ಕಾಶ್ಮೀರದ ಹೊಸ ಸರ್ಕಾರ ಸಿದ್ಧತೆ ನಡೆಸಿದೆ. ಕ್ರಿಮಿನಲ್ ಆರೋಪಗಳಿಲ್ಲದ ರಾಜಕೀಯ ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಸರ್ಕಾರದ ಹೊಸ ನೀತಿಯ ಅಂಶದ ಜಾರಿಗೆ ಸಿದ್ಧವಾಗಿದೆ.

ಜಮ್ಮು ಕಾಶ್ಮೀರ ಮುಸ್ಲಿಂ ಲೀಗ್ ನ ೪೨ ವರ್ಷದ ಆಲಂನ ಬಿಡುಗಡೆಗೆ ಗೃಹ ಸರ್ಕಾರಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದು, ತಾಂತ್ರಿಕವಾಗಿ ಅವರು ಈಗಾಗಲೇ ಮುಕ್ತ ಎಂದು ಬಾರಾಮುಲ್ಲ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಔಪಚಾರಿಕ ಕಟ್ಟಳೆಗಳನ್ನು ಮುಗಿಸಿದರೆ ಅವರು ಬಂಧನಮುಕ್ತರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವರ ಕಲ್ಲೆಸೆಯುವ ಪ್ರತಿಭಟನೆಯ ಸಮಯದಲ್ಲಿ ಕಣಿವೆಯಲ್ಲಿ ಹಲವಾರು ಜನ ಮೃತಪಟ್ಟಿದ್ದರು.

ಆಲಂ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಡಿಜಿಪಿ ಕೆ ರಾಜೇಂದ್ರ ತಿಳಿಸಿದ್ದಾರೆ.

ಯಾವುದೇ ಕ್ರಿಮಿನಲ್ ಆರೋಪಗಳಿಲ್ಲದ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರ ಆದೇಶವನ್ನು ಪಾಲಿಸಲಿದ್ದೇವೆ ಎಂದು ರಾಜೇಂದ್ರ ಈ ಹಿಂದೆ ತಿಳಿಸಿದ್ದರು.

SCROLL FOR NEXT