ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶ್ರೀಲಂಕಾ ಪ್ರಧಾನಿಗೆ ಮೀನುಗಾರರ ಪ್ರಕರಣವನ್ನು ಮಾನವೀಯತೆ ದೃಷ್ಟಿಯಿಂದ ನೋಡುವಂತೆ ಹೇಳಿದ ಸುಷ್ಮಾ

ಭಾರತದ ಮೀನುಗಾರರು ಶ್ರೀಲಂಕಾದ ನೀರಿಗೆ ತೆರಳುವುದನ್ನು ಕಾನೂನು ರೀತ್ಯಾ ನೋಡದೆ, ಮಾನವೀಯತೆಯಿಂದ ಕಾಣಲು

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ
Guruprasad Narayana
Updated On : 7 Mar 2015, 7:03 am

ಕೊಲೊಂಬೊ: ಭಾರತದ ಮೀನುಗಾರರು ಶ್ರೀಲಂಕಾದ ನೀರಿಗೆ ತೆರಳುವುದನ್ನು ಕಾನೂನು ರೀತ್ಯಾ ನೋಡದೆ, ಮಾನವೀಯತೆಯಿಂದ ಕಾಣಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೆ ತಿಳಿಸಿದ್ದಾರೆ.

ಶನಿವಾರ ವಿಕ್ರಮಸಿಂಘೆ ಅವರ ಜೊತೆ ನಡೆದ ಮಾತುಕತೆಯಲ್ಲಿ, ಸಂಘರ್ಷದ ವಿಷಯವಾದ ಮೀನುಗಾರರ ವಿಷಯವನ್ನು ಚರ್ಚಿಸಿದ ಸುಷ್ಮಾ ಸ್ವರಾಜ್, ಭಾರತ ಮತ್ತು ಶ್ರೀಲಂಕಾದ ಮೀನುಗಾರರ ದಿನನಿತ್ಯದ ಅಗತ್ಯದ ಹಿತದೃಷ್ಟಿ ಮತ್ತು ಮಾನವೀಯ ಅಗತ್ಯಗಳನ್ನು ಪರಿಗಣಿಸಿ ಈ ಪ್ರಕರಣವನ್ನು ನೋಡಬೇಕೆಂದು ಸುಷ್ಮಾ ಹೇಳಿದ್ದಾರೆ.

ಲಂಕಾದ ಎರಡು ದಿನದ ಪ್ರವಾಸದ ನಂತರ ಮಾತನಾಡಿದ ಭಾರತ ಸರ್ಕಾರದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಭಾರತ ಲಂಕಾ ನೀರಿನ ಗಡಿಗೂ, ಇಟಾಲಿಯನ್ ಸಮುದ್ರಕ್ಕೂ ವ್ಯತ್ಯಾಸವಿದೆ. ಮೊದಲಿನದ್ದು ಮಾನವೀಯತೆಗೆ ಸಂಬಂಧಿಸಿದ್ದು ಎರಡನೆಯದು ಕಾನೂನಾತ್ಮಕವಾದದ್ದು ಎಂದಿದ್ದಾರೆ.

ಭಾರತದ ಮೀನುಗಾರರು ಗಡಿ ದಾಟಿದರೆ ಅವರನ್ನು ನಾವು ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಖಾಸಗಿ ವಾಹಿನಿಯೊಂದರ ಸಂದರ್ಶನಲ್ಲಿ ರನಿಲ್ ವಿಕ್ರಮಸಿಂಘೆ ಹೇಳಿದ್ದ ವರದಿಯ ಹಿನ್ನಲೆಯಲ್ಲಿ ಸುಷ್ಮಾ ಸ್ವರಾಜ್ ಈ ಮಾತುಕತೆ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement