ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಿಎಂ ಆಕ್ಷೇಪ
ಚಿತ್ರ ಪ್ರಸಾರದಿಂದ ನಿರ್ಭಯಾ ವ್ಯಕ್ತಿತ್ವಕ್ಕೆ ಧಕ್ಕೆ ಅತ್ಯಾಚಾರಿ, ವಕೀಲರ ಹೇಳಿಕೆ ಸರಿಯಲ್ಲಬೆಂಗಳೂರು: ನಿರ್ಭಯಾ ಅತ್ಯಾಚಾರ ಪ್ರಕರಣದ ಬಗ್ಗೆ ಬಿಬಿಸಿ ವಾಹಿನಿ ತಯಾರಿಸಿದ
-ಅತ್ಯಾಚಾರಿ, ವಕೀಲರ ಹೇಳಿಕೆ ಸರಿಯಲ್ಲ
ಬೆಂಗಳೂರು: ನಿರ್ಭಯಾ ಅತ್ಯಾಚಾರ ಪ್ರಕರಣದ ಬಗ್ಗೆ ಬಿಬಿಸಿ ವಾಹಿನಿ ತಯಾರಿಸಿದ ಸಾಕ್ಷ್ಯಚಿತ್ರ ಅತ್ಯಾಚಾರಕ್ಕೊಳಗಾದ ಯುವತಿಯ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಕ್ಷ್ಯಚಿತ್ರದಲ್ಲಿರುವ ಹೇಳಿಕೆ ಹಾಗೂ ಅದರ ಉದ್ದೇಶ ಯುವತಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಿದೆ. ಬಹಿರಂಗವಾಗಿ ಎಲ್ಲರೂ ನೋಡುವಂತೆ ಚಿತ್ರ ಪ್ರಸಾರ ಮಾಡಿದ್ದರಿಂದ ಯುವತಿಯ ಕುಟುಂಬದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಅತ್ಯಾಚಾರಿ ಹಾಗೂ ಆತನನ್ನು ಬೆಂಬಲಿಸುವ ವಕೀಲರು ಹೇಳಿರುವ ಮಾತುಗಳು ಸರಿಯಲ್ಲ. ಮಾಧ್ಯಮಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರೂ ಇನ್ನೊಬ್ಬರಿಗೆ ನೋವುಂಟು ಮಾಡುವಂತೆ ಸ್ವಾತಂತ್ರ್ಯವನ್ನು ಬಳಸಿ ಕೊಳ್ಳಬಾರದು ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯದ ಜನಸಂಖ್ಯೆಯಲ್ಲಿ ಶೇ.50ಕ್ಕೂ ಹೆಚ್ಚು ಮಹಿಳೆಯರಿದ್ದಾರೆ ಎಂದು ಅಂದಾಜಿಸಲಾಗಿದೆ.
ಆದರೆ ಭ್ರೂಣಹತ್ಯೆಯಿಂದ ಲಿಂಗಾನುಪಾತ 1,000 ಪುರುಷರಿಗೆ 983 ಮಹಿಳೆಯರ ಪ್ರಮಾಣಕ್ಕೆ ಇಳಿದಿದೆ. ಅಕ್ಷರತೆಯ ಪ್ರಮಾಣ ಪುರುಷರಲ್ಲಿ ಶೇ.82 ಹಾಗೂ ಮಹಿಳೆಯರಲ್ಲಿ ಶೇ.68 ರಷ್ಟಿದೆ. ಲಿಂಗಸಮಾನತೆ ತರಲು ಈ ಪ್ರಮಾಣ ಹೆಚ್ಚಳವಾಗಬೇಕು. 1.40 ಲಕ್ಷ ಸ್ತ್ರೀಶಕ್ತಿ ಸಂಘಗಳಲ್ಲಿ 20 ಲಕ್ಷ ಮಹಿಳೆಯರಿದ್ದು, ಸುಸ್ತಿ ನಿಧಿಯನ್ನು ರು.5 ಸಾವಿರದಿಂದ ರು. 25 ಸಾವಿರಕ್ಕೆ ಏರಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರಿಗೆ ಒಂದೇ ಸೂರಿನಡಿ ಚಿಕಿತ್ಸೆ, ಕಾನೂನು ಬೆಂಬಲ ನೀಡಲಾಗುತ್ತಿದೆ ಎಂದರು. ಸಚಿವರಾದ ಉಮಾಶ್ರೀ, ಕೆ.ಜೆ.ಜಾರ್ಜ್, ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯರಾದ ತಾರಾ ಅನುರಾಧ, ಜಯಮಾಲಾ, ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಮೇಯರ್ ಶಾಂತಕು ಮಾರಿ, ಬಾಲಭವನ ಅಧ್ಯಕ್ಷೆ ಭಾವನಾ, ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ವಾಸಂತಿ ಶಿವಣ್ಣ, ಚಿನ್ನದ ಗಣಿ ನಿಗಮ ಅಧ್ಯಕ್ಷೆ ರಾಣಿ ಸತೀಶ್ ಹಾಜರಿದ್ದರು.
ನಾನಾ ಕ್ಷೇತ್ರಗಳ ಮಹಿಳಾ ಸಾಧಕರು
ಸಾಧಕರಿಗೆ ಪ್ರಶಸ್ತಿ : ಕಲೆ, ಕ್ರೀಡೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕ ಮಹಿಳೆಯರಿಗೆ ಹಾಗೂ ಸಂಸ್ಥೆಗಳಿಗೆ `ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಸಂಸ್ಥೆಗಳು: ಚುಂಚಾದ್ರಿ ಮಹಿಳಾ ವೇದಿಕೆ, ಮಧುಶ್ರೀ ಮಹಿಳಾ ಸಮಾಜ, ಮಹಿಳಾ ವೃತ್ತಿಶಿಕ್ಷಣ ಮತ್ತು ಅಭಿವೃದ್ಧಿ ಸಂಘ, ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಿವ್ಯದರ್ಶನ ರೂರಲ್ ಡೆವಲಪ್ಮೆಂಟ್ ಸೆಲ್ಫೆ ಎಂಪ್ಲಾಯ್ ಮೆಂಟ್, ಸಹಯೋಗ ಸ್ವಯಂಸೇವಾ ಸಂಸ್ಥೆ.
ಮಹಿಳಾ ಅಬಿವೃದ್ಧಿ: ಶಾಂತಾ ಕೊಟ್ರೇಶ್, ಅಮೀರಾ ಬಾನು, ಎಚ್.ವಿ.ಕಮಲಮ್ಮ, ಮುತ್ತು ಮಡಿವಾಳ್ತಿ, ಜ್ಯೋತಿ ವಿನಾಯಕ ಭಟ್, ಲಲಿತಾ ಶಾಸ್ತ್ರೀ, ಬಿ.ಎಸ್.ಅನುಪಮಾ, ಯುವಾನ್ ಲೊಮಾಕ್ಸ್.
ಕಲೆ: ಲಕ್ಷಮಮ್ಮ, ಗೀತಾ ಸಂಜೀವಿನಿ ಕುಲಕರ್ಣಿ, ಥೆರೇಸಮ್ಮ ಡಿಸೋಜ, ಭಾರತಿ ಚಂದ್ರಶೇಖರ ಸರಗಣಾಚಾರಿ, ಹನೀಫಾಶೇಖ್.
ಶಿಕ್ಷಣ: ಶಾಂತಿ ದೇಸಾಯಿ. ಸಾಹಿತ್ಯ: ಮ.ನ.ಲತಾಮೋಹನ್, ಡಾ.ವೀಣಾಭಾರತಿ, ಎ.ವೀಣಾ, ಎಂ.ಪಿ.ಮಾಚಮ್ಮ.
ಸ್ತ್ರೀ ಶಕ್ತಿ ಗುಂಪು: ಆಂಜನೇಯ ಸ್ತ್ರೀಶಕ್ತಿ ಸ್ವಸಹಾಯ ಸಂಘ, ದಿವ್ಯಜ್ಯೋತಿ ಸ್ವಸಹಾಯ ಸಂಘ, ಬಸವೇಶ್ವರ ಸ್ತ್ರೀಶಕ್ತಿ ಸಂಘ, ಪ್ರಗತಿ ಸ್ತ್ರೀಶಕ್ತಿ ಗುಂಪು.
ಸ್ತ್ರೀಶಕ್ತಿ ಒಕ್ಕೂಟ: ಹರಿಹರ, ಉಡುಪಿ ಹಾಗೂ ಹೊಸಕೋಟೆ ತಾಲೂಕು ಸಿuಉೀಶಕ್ತಿ ಒಕ್ಕೂಟಗಳು.
ಶ್ರೀಮತಿ ಯಶೋಧರಮ್ಮ ದಾಸಪ್ಪ ಪ್ರಶಸ್ತಿ: ಸಿಂಧು ಶ್ರೀ ಸ್ವಸಹಾಯ ಸಂಘ, ದೇವಿ ಸ್ತ್ರೀಶಕ್ತಿ ಗುಂಪು, ಶಿವಶಕ್ತಿ ಸ್ತ್ರೀಶಕ್ತಿ ಗುಂಪು, ಉಮಾಮಹೇಶ್ವರಿ ಸ್ತ್ರೀಶಕ್ತಿ ಸಂಘ.
ವಿಶೇಷ ಸಾಧನೆ: ಚಂದಮ್ಮ, ಹಸೀನಾ, ಸುವರ್ಣ, ಭಾವನಾ, ಮೊಹಸಬೀನ್.