ಪ್ರಧಾನ ಸುದ್ದಿ

ಚೀನಾ ರಾಯಭಾರಿ ಕಚೇರಿ ಎದುರು ಟಿಬೆಟಿಯನ್ನರ ಪ್ರತಿಭಟನೆ

Guruprasad Narayana

ನವದೆಹಲಿ: ಬಹಳಷ್ಟು ಟಿಬೆಟ್ಟಿಯನ್ನರು ಚೀನಾ ರಾಯಭಾರಿ ಕಚೇರಿ ಎದುರು ಟಿಬೆಟ್ ಜನ್ಮದಿನವಾದ ಇಂದು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

"ಟಿಬೆಟ್ ಗೆ ಸ್ವಾತಂತ್ರ್ಯ ನೀಡಿ" ಎಂದು ಬರೆದ ಭಿತ್ತಿಚಿತ್ರಗಳನ್ನಿಡಿದು, ಟಿಬೆಟಿಯನ್ ಬಾವುಟಗಳನ್ನು ಹಾರಿಸಿ, ರಾಯಭಾರಿ ಕಚೇರಿಯ ಎದುರಿನ ತೋಟದಲ್ಲಿ ಗುಂಪುಕಟ್ಟಿ ಸ್ವಾತಂತ್ರಪರವಾದ ಘೋಷಣೆಗಳನ್ನು ಕೂಗಿದ್ದರೆ.

ಹಲವರು ಕಪ್ಪು ಮುಸುಕನ್ನು ತಮ್ಮ ಮುಖದ ಮೇಲೆ ಧರಿಸಿದ್ದರಲ್ಲದೆ, ತಮ್ಮ ಗದ್ದದ ಮೇಲೆ ಟಿಬೆಟಿಯನ್ ಬಾವುಟವನ್ನು ಬರೆದುಕೊಂಡಿದ್ದರು,

ಈ ಎಲ್ಲ ಪ್ರತಿಭಟನಕಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಹತ್ತಿರದಲ್ಲಿದ್ದ ಪೋಲಿಸ್ ವಾಹನಗಳೊಳಗೆ ಎಳೆದು ಹಾಕಿದ್ದಾರೆ.

SCROLL FOR NEXT