ಪ್ರಧಾನ ಸುದ್ದಿ

ಆರ್ ಜೆ ಡಿ, ಸಿಪಿಐ ಸಹಕಾರ; ನಿತೀಶ್ ಕುಮಾರ್ ಬಹುಮತ ಸಾಬೀತು

Guruprasad Narayana

ಪಾಟ್ನಾ: ಆರ್ ಜೆ ಡಿ, ಕಾಂಗ್ರೆಸ್, ಸಿಪಿಐ ಮತ್ತು ಓರ್ವ ಸ್ವತಂತ್ರ ಶಾಸಕನ ನೆರವಿನಿಂದ ಇಂದು ನಿತೀಶ್ ಕುಮಾರ್ ಸರ್ಕಾರ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ ವಿರೋಧ ಪಕ್ಷ ಬಿಜೆಪಿ ಸದನದಿಂದ  ಹೊರನಡೆದ ಘಟನೆ ನಡೆದಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಪರವಾಗಿ ೧೪೦ ಸದಸ್ಯರು ಮತ ಹಾಕಿದ್ದರೆ ಅವರ ವಿರುದ್ಧ ಯಾವುದೇ ಮತ ಬಿದ್ದಿಲ್ಲ ಎಂದು ಸ್ಪೀಕರ್ ಉದಯ್ ನಾರಾಯಣ ಚೌಧರಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಜಿತನ್ ರಾಮ್ ಮಾಂಝಿ ಹೊರತುಪಡಿಸಿ ಜೆಡಿಯು ಪಕ್ಷದ ೧೦೯ ಶಾಸಕರು, ಆರ್ ಜೆ ಡಿ ಪಕ್ಷದ ೨೪, ಕಾಂಗ್ರೆಸ್ ಪಕ್ಷದ ೫, ಮತ್ತು ಸಿಪಿಐ ಪಕ್ಷದ ಒಬ್ಬ ಹಾಗು ಓರ್ವ ಸ್ವತಂತ್ರ ಶಾಸಕ ಸರ್ಕಾರದ ಪರವಾಗಿ ಮತ ಹಾಕಿದ್ದಾರೆ. ನಿತೀಶ್ ಕುಮಾರ್ ವಿರೋಧಿ ಜೆಡಿಯು ಶಾಸಕರು ಕೂಡ ಪಕ್ಷದ ಸದಸ್ಯತ್ವ ರದ್ದು ಮಾಡುವ ವಿಪ್ ಗೆ ಹೆದರಿ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ.

೮೭ ಶಾಸಕರನ್ನು ಹೊಂದಿರುವ ಬಿಜೆಪಿ ಪಕ್ಷ ಸದನದಿಂದ ಹೊರನಡೆದದ್ದರಿಂದ ಸರ್ಕಾರದ ವಿರುದ್ಧ ಯಾವುದೇ ಮತ ಚಲಾವಣೆ ಆಗಲಿಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಯು ಪಕ್ಷದ ಮುಖಂಡ ಮಾಂಝಿ ಸದನಕ್ಕೆ ಗೈರು ಹಾಜರಾಗಿದ್ದರು. 

SCROLL FOR NEXT