ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಖೋಟಾ ನೋಟು ಪ್ರಕರಣ: ಬಾಂಗ್ಲಾ ಮಹಿಳೆಯೂ ಸೇರಿದಂತೆ ಮೂವರ ಬಂಧನ

ಖೋಟಾ ನೋಟು ಚಲಾವಣೆ ಹಗರಣದಲ್ಲಿ ಓರ್ವ ಬಾಂಗ್ಲಾ ದೇಶಿ ಮಹಿಳೆ ಮತ್ತು ಪಕ್ಕದ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ

ಪುದುಚೆರಿ: ಖೋಟಾ ನೋಟು ಚಲಾವಣೆ ಹಗರಣದಲ್ಲಿ ಓರ್ವ ಬಾಂಗ್ಲಾ ದೇಶಿ ಮಹಿಳೆ ಮತ್ತು ಪಕ್ಕದ ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಕೀಝ್ ಶತಮಂಗಳಮ್ ಗ್ರಾಮದ ಬಸ್ ನಿರ್ವಾಹಕನೊಬ್ಬ ಬೆಂಗಳೂರಿನ ಆಕ್ಸಿಸ್ ಬ್ಯಾಂಕ್ ನಲ್ಲಿ ಮತ್ತೊಬ್ಬನ ಖಾತೆಗೆ ೪೦ ಸಾವಿರ ರೂ ಖೋಟ ನೋಟು ಜಮಾ ಮಾಡಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗದನ್ನು ಎಣಿಸುವಾಗ, ಬ್ಯಾಂಕ್ ಸಿಬ್ಬಂದಿ ೫೦೦ ರೂ ಮತ್ತು ೧೦೦ ರೂ ನೋಟುಗಳ ಸುಮಾರು ೨೧ ಸಾವಿರ ರೂ ಮೊತ್ತದ ಹಣ ನಕಲಿ ಎಂದು ಕಂಡು ಹಿಡಿದಿದ್ದಾರೆ.

ಬ್ಯಾಂಕ್, ಪೊಲೀಸ ಠಾಣೆಯಲ್ಲಿ ದೂರು ಸಲ್ಲಿಸಿದ್ದರಿಂದ ಪೊಲೀಸರು ಆ ಮನುಷ್ಯನನ್ನು ಬಂಧಿಸಿದ್ದಾರೆ.

ವಿಚಾರಣೆಯ ನಂತರ ಆ ಮನುಷ್ಯ, ೨೯ ವರ್ಷದ ಬಾಂಗ್ಲಾ ದೇಶದ ಮಹಿಳೆಯೊಬ್ಬಳು ಈ  ಹಣ ನೀಡಿ ಮತ್ತೊಂದು ಖಾತೆಗೆ ಜಮಾ ಮಾಡಲು ತಿಳಿಸಿದಳು ಎಂದು ಪೊಲೀಸರಿಗೆ ತಿಳಿಸಿದ ಹಿನ್ನಲೆಯಲ್ಲಿ ಮೂರೂ ಜನರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೀತ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

'ಪೋಷಕರು ನನ್ನ ಆ ಖಾಸಗಿ ವಿಡಿಯೋ ನೋಡಿದ್ದರು, ಏರ್‌ಪೋರ್ಟ್‌ನಲ್ಲೇ ಕುಳಿತು ಅತ್ತಿದ್ದೆ: ವೈರಲ್‌ ಪಾರ್ಟಿ ಬಗ್ಗೆ ಅಪೂರ್ವ ಮುಖಿಜಾ! Video

ಪ್ರಜ್ವಲ್​​ ರೇವಣ್ಣಗೆ ಬಿಗ್ ಶಾಕ್; ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಮಾಜಿ ಸಂಸದನ ಶಿಫ್ಟ್!

CJP ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲುಗಳ ರದ್ದತಿ: ಯುವಕರಿಗೆ ಹೆದರುವುದಾದರೆ ಇಡೀ ದೇಶವನ್ನೇ ಬಂದ್ ಮಾಡಿ; ಕೇಂದ್ರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!