ಪ್ರಧಾನ ಸುದ್ದಿ

ಬುದ್ಧನಿಗೆ ಅಪಮಾನ; ನ್ಯೂಜಿಲ್ಯಾಂಡ್ ನಾಗರಿಕನಿಗೆ ಜೈಲು ಶಿಕ್ಷೆ ನೀಡಿದ ಮಯನ್ಮಾರ್ ಕೋರ್ಟ್

Guruprasad Narayana

ಬುದ್ಧ ಹಾಡು ಕೇಳುತ್ತಿರುವಂತೆ ಹೆಡ್ ಫೋನ್ ತೊಟ್ಟಿದ್ದ ಭಿತ್ತಿಚಿತ್ರ ರಚಿಸಿ ಬೌದ್ಧ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ ನ್ಯೂಜಿಲ್ಯಾಂಡ್ ಮೂಲದ ಬಾರ್ ಮಾಲಿಕನೂ ಸೇರಿದಂತೆ ಅವನ ವ್ಯವಾಹಾರದ ಸಹೋದ್ಯೋಗಿಗಳಿಗೆ ಮಯನ್ಮಾರ್ ನ್ಯಾಯಾಲಯ ೨ ವರ್ಷ ೬ ತಿಂಗಳ ಜೈಲು ಸಜೆಯ ತೀರ್ಪು ನೀಡಿದೆ.

ಬ್ಲ್ಯಾಕ್ ವುಡ್ (೩೨), ಟನ್ ತುರೈನ್ ಮತ್ತು ಟುಟ್ ಕೊ ಕೊ ಲ್ವಿನ್ ಅವರಿಗೆ ಮತಧರ್ಮವನ್ನು ಅವಮಾನಿಸಿದ್ದಕ್ಕೆ ೨ ವರ್ಷದ ಕಠಿಣ ಸಜೆ ಹಾಗೂ ಸಾರ್ವಜನಿಕ ಅಧಿಕಾರಿಯ ಮಾತು ಮೀರಿದ್ದಕ್ಕೆ ಆರು ತಿಂಗಳ ಸಜೆ ನೀಡಿದೆ.

ಬಾರ್ ಮಾಲೀಕ ವಿ ಗ್ಯಾಸ್ಟ್ರೊ ಬ್ಲ್ಯಾಕ್ ವುಡ್ ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಟನ್ ತುರೈನ್ ಮತ್ತು ಟುಟ್ ಕೊ ಕೊ ಲ್ವಿನ್ ಅವರ ಈ ವಿಚಾರಣೆ ಮತ್ತು ತೀರ್ಪು ಮಯನ್ಮಾರಿನಲ್ಲಿ ಹೆಚ್ಚುತ್ತಿರುವ ಬೌದ್ಧ ರಾಷ್ಟ್ರೀಯತೆ ಮತ್ತು ಅಲ್ಪಸಂಖ್ಯಾತ ಅದರಲ್ಲೂ ಮುಸ್ಲಿಂ ಸಮುದಾಯದ ಮೇಲೆ ಹೆಚ್ಚುತ್ತಿರುವ ಹಿಂಸೆಯ ಹಿನ್ನಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಪಾಸ್ ಬಾರ್ ಮತ್ತು ಲಾಂಜ್ ಅನ್ನು ಪ್ರಚಾರ ಮಾಡಲು ವಿವಾದಾತ್ಮಕ ಭಿತ್ತಿಚಿತ್ರವನ್ನು ಬಳಸಿದ ಆರೋಪದ ಮೇಲೆ ಈ ಮೂವರನ್ನು ಕಳೆದ ಡಿಸೆಂಬರ್ ನಲ್ಲಿ ಬಂಧಿಸಲಾಗಿತ್ತು.

SCROLL FOR NEXT