ವಾಶಿಂಗ್ಟನ್: ಯು ಎಸ್ ನಾಗರಿಕ ಮತ್ತು ವಲಸೆ ಸೇವೆ (ಯು ಎಸ್ ಸಿ ಐ ಎಸ್) ಪ್ರಕಾರ ಅಮೇರಿಕಾ ಕಳೆದ ವರ್ಷ ೭೦೦ ಭಾರತೀಯರಿಗೆ ರಾಜಕೀಯ ಆಶ್ರಯ ನೀಡಿದೆ. ೨೦೧೩ ರಲ್ಲಿ ಈ ಸಂಖ್ಯೆ ೪೧೯ ಇತ್ತು.
"ಯು ಎಸ್ ಸಿ ಐ ಎಸ್ ಆಶ್ರಯ ಘಟಕ ೨೦೧೩ ರಲ್ಲಿ ೪೧೩ ಜನ ಭಾರತೀಯ ಮೂಲದ ಅಥವ ಭಾರತೀಯರಿಗೆ ಮತ್ತು ೨೦೧೪ರಲ್ಲಿ ೭೦೦ ಜನಕ್ಕೆ ರಾಜಕೀಯ ಆಶ್ರಯ ನೀಡಿದೆ" ಎಂದು ಕ್ಯಾಲಿಫೋರ್ನಿಯ ಮೂಲದ ಅಮೇರಿಕಾ ಪಂಜಾಬಿ ಸಂಘಟನೆಗೆ ಸ್ವತಂತ್ರ ಮಾಹಿತಿ ಹಕ್ಕು ಕಾಯ್ದೆಯಡಿ ಬರೆದ ಪತ್ರವೊಂದರಲ್ಲಿ ತಿಳಿಸಿದೆ.
"ಇದು ಪ್ರತ್ಯೇಕವಾಗಿ ಕೆಲವರಿಗೆ ನ್ಯಾಯಾಂಗ ಇಲಾಖೆಯ ವಲಸೆ ಪರಿವೀಕ್ಷಣೆಯ ನ್ಯಾಯಾಧೀಶ ಅಧಿಕಾರಿ ನೀಡಿರಬಹುದಾದ ಆಶ್ರಯವನ್ನು ಹೊರತುಪಡಿಸಿದೆ" ಎಂದು ಯು ಎಸ್ ಸಿ ಐ ಎಸ್ ತಿಳಿಸಿದೆ.
"ಇದರಿಂದ ಒಂದಂತೂ ಸ್ಪಷ್ಟ. ಅಮೇರಿಕಾದಲ್ಲಿ ರಾಜಕೀಯ ಆಶ್ರಯ ಪಡೆಯುತ್ತಿರುವ ಭಾರತೀಯ ಮೂಲದ ಜನ ಹೆಚ್ಚುತ್ತಿದ್ದಾರೆ. ಇದು ಚಿಂತಿಸಬೇಕಾದ ವಿಷಯ" ಎಂದು ಅಮೇರಿಕಾ ಪಂಜಾಬಿ ಸಂಘಟನೆಯ ಅಧ್ಯಕ್ಷ ಸಂತನಂ ಸಿಂಗ್ ಚಾಹಲ್ ತಿಳಿಸಿದ್ದಾರೆ.