ಟೋಕಿಯೋ: ಟುನಿಷಾದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೂರು ಜನ ಜಪಾನಿ ನಾಗರಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಜಪಾನ್ ಸರ್ಕಾರ ಗುರುವಾರ ತಿಳಿಸಿದೆ.
ಇದಕ್ಕೂ ಮುಂಚೆ ೧೯ ಜನ ಮೃತಪಟ್ಟವರಲ್ಲಿ ೫ ಜಪಾನಿ ನಾಗರಿಕರು ಎಂದು ಟುನಿಷಾ ಪ್ರಧಾನಮಂತ್ರಿ ತಿಳಿಸಿದ್ದರು. ಆದರೆ ವರದಿಯನ್ನು ಪರಿಶೀಲಿಸಿದ ನಂತರ ಮೃತಪಟ್ಟವರ ಹೆಸರುಗಳು ಮತ್ತೆ ಮತ್ತೆ ಬಂದಿದ್ದು, ಮೃತಪಟ್ಟವರ ಜಪಾನಿ ನಾಗರಿಕರ ಸಂಖ್ಯೆ ೩ ಎಂದು ಜಪಾನಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರು ಜನ ಜಪಾನಿ ನಾಗರಿಕರು ಸಾವು ಮತ್ತು ಮೂರು ಜನ ತೀವ್ರ ಗಾಯಗೊಂಡಿದ್ದಾರೆ ಎಂದು ಧೃಢೀಕರಿಸಿರುವ ಜಪಾನ್ ಪ್ರಧಾನಿ ಶಿನ್ಜೋ ಅಬೆ "ಭಯೋತ್ಪಾದನೆಯನ್ನು ಯಾವ ಸನ್ನಿವೇಶದಲ್ಲೂ ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
ವಸ್ತು ಸಂಗ್ರಹಾಲಯದ ಬಳಿ ಬಸ್ಸಿನಿಂದ ಇಳಿಯುತ್ತಿದ್ದ ಪ್ರವಾಸಿಗರ ಮೇಲೆ, ವಾಹನವೊಂದರಿಂದ ಇಳಿದ ಇಬ್ಬರು ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಟುನಿಷಾ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ.
ಈ ದಾಳಿಯನ್ನು ಅಮೇರಿಕಾ ಮತ್ತು ವಿಶ್ವ ಸಂಸ್ಥೆ ತೀವ್ರವಾಗಿ ಖಂಡಿಸಿದೆ.