ಲೀ ಕೌನ್ ಯು 
ಪ್ರಧಾನ ಸುದ್ದಿ

ಸಿಂಗಪುರದ ಮೊದಲ ಪ್ರಧಾನಿ ಲೀ ಕೌನ್ ಯು ನಿಧನ

ಸಿಂಗಪುರದ ಸಂಸ್ಥಾಪಕ ಪಿತಾಮಹ ಹಾಗೂ ಮೊದಲ ಪ್ರಧಾನ ಮಂತ್ರಿ ಲೀ ಕೌನ್ ಯು ತೀವ್ರ ನ್ಯುಮೋನಿಯಾದಿಂದ....

ಸಿಂಗಪುರ: ಸಿಂಗಪುರದ ಸಂಸ್ಥಾಪಕ ಪಿತಾಮಹ ಹಾಗೂ ಮೊದಲ ಪ್ರಧಾನ ಮಂತ್ರಿ ಲೀ ಕೌನ್ ಯು ತೀವ್ರ ನ್ಯುಮೋನಿಯಾದಿಂದ ೯೧ನೆ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

ಫೆಬ್ರವರಿ ೫ ರಿಂದ ಸಿಂಗಪುರ ಜನರಲ್ ಆಸ್ಪತ್ರೆಯಲ್ಲಿ ತೀವ್ರ ನ್ಯುಮೋನಿಯಾದಿಂದ ಲೀ ದಾಖಲಾಗಿದ್ದರು.

ಪ್ರಧಾನಮಂತ್ರಿ ಕಾರ್ಯಾಲಯ ನೀಡಿರುವ ಅಧಿಕೃತ ಹೇಳಿಕೆಯಲ್ಲಿ ಸಿಂಗಪುರ ಜನರಲ್ ಆಸ್ಪತ್ರೆಯಲ್ಲಿ ಸಮಯ ೩.೧೮ಕ್ಕೆ(ಪ್ರಾದೇಶಿಕ ಸಮಯ) ಲೀ ಅವರು ಶಾಂತಿಯುತವಾಗಿ ನಮ್ಮನ್ನಗಲಿದ್ದಾರೆ ಎಂದು ಸ್ಟ್ರೇಟ್ಸ್ ಟೈಮ್ಸ್ ವರದಿ ಮಾಡಿದೆ.

ಸಿಂಗಪುರದ ಸಂಸ್ಥಾಪಕ ಪಿತಾಮಹ ಎಂದೇ ಹೆಸರಾದ ಲೀ ನಗರವನ್ನು ೩ ದಶಕಗಳಲ್ಲಿ ಆರ್ಥಿಕತೆಯ ಅಧಿಕಾರತಾಣವಾಗಿ ಪರಿವರ್ತಿಸಿದ ಹೆಗ್ಗಳಿಕೆ ಅವರದ್ದು. ೩೧ ವರ್ಷ ಆಡಳಿತ ನಡೆಸಿದ ಮೇಲೆ ೧೯೯೦ರಲ್ಲಿ ಪ್ರಧಾನಮಂತ್ರಿ ಹುದ್ದೆ ತೊರೆದಿದ್ದರು.

ಲೀ ಅವರು ತಮ್ಮ ಇಬ್ಬರು ಗಂಡು ಮಕ್ಕಳಾದ ಸದ್ಯದ ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್(೬೩) ಮತ್ತು ಲೀ ಸೀನ್ ಯಾಂಗ್(೫೭) ಮಗಳು ಲೀ ವಿ ಲಿಂಗ್(೬೦)  ಹಾಗು ಏಳು ಜನ ಮೊಮ್ಮಕ್ಕಳು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. ಅವರ ಪತ್ನಿ ೮೯ನೆ ವಯಸ್ಸಿನಲ್ಲಿ ೨೦೧೦ರಲ್ಲಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!