ಪ್ರಧಾನ ಸುದ್ದಿ

ಭಗತ್ ಸಿಂಗ್, ಸುಖ್ ದೇವ್, ರಾಜಗುರು ಹುತಾತ್ಮ ದಿನ; ಪ್ರಧಾನಿ ನಮನ

Guruprasad Narayana

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ್ ಅವರಿಗೆ ಹುತಾತ್ಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ನಮನ ಸಲ್ಲಿಸಿದ್ದಾರೆ.

"ದೇಶಕ್ಕಾಗಿ ಪ್ರಾಣ ತೊರೆದ ಭಗತ್ ಸಿಂಗ್, ರಾಜಗುರು ಮತ್ತು ಸುಖ್ ದೇವ ಅವರಿಗೆ ನಮಸ್ಕಾರ. ಈ ರಾಷ್ಟ್ರಭಕ್ತರಿಗೆ ನನ್ನ ನಮನ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ೧೯೩೧ ರಲ್ಲಿ ಈ ಹೋರಾಟಗಾರರ ಕೊನೆಯ ವಿಧಿಗಳನ್ನು ಆಚರಿಸಿದ ಸ್ಥಳಕ್ಕೆ ಭೇಟಿ ನೀಡಿರುವ ನರೇಂದ್ರ ಮೋದಿ ಗೌರವ ಸಮರ್ಪಣೆ ಮಾಡಿದ್ದಾರೆ.

"ಇಂದು ಪಂಜಾಬಿನಲ್ಲಿದ್ದೇನೆ. ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜಗುರು ಅವರಿಗೆ ಗೌರವ ಸಲ್ಲಿಸಲಿದ್ದೇನೆ ಹಾಗು ಜಲಿಯನ್ ವಾಲಾ ಭಾಗ್ ಮತ್ತು ಸ್ವರ್ಣ ಮಂದಿರಕ್ಕೆ ಭೇಟಿ ಕೊಡಲಿದ್ದೇನೆ" ಎಂದು ಕೂಡ ಮೋದಿ ಟ್ವೀಟ್ ಮಾಡಿದ್ದಾರೆ.


ಸೆಪ್ಟಂಬರ್ ೧೯೦೭ರಲ್ಲಿ ಜನಿಸಿದ ಭಗತ್ ಸಿಂಗ್, ಭಾರತೀಯ ಸ್ವಾತಂತ್ರ ಹೋರಾಟದ ಅತಿ ಮುಖ್ಯ ಕ್ರಾಂತಿಕಾರಿಗಳಲ್ಲೊಬ್ಬರು. ಲಾಹೋರಿನ ಜೈಲಿನಲ್ಲಿ ರಾಜಗುರು ಮತ್ತು ಸುಖ್ ದೇವ್ ಅವರೊಂದಿಗೆ ಮಾರ್ಚ್ ೨೩ ೧೯೩೧ರಂದು ಇವರನ್ನು ಗಲ್ಲಿಗೇರಿಸಲಾಗಿತ್ತು.

SCROLL FOR NEXT