ಪ್ರಧಾನ ಸುದ್ದಿ

ರವಿ ಪ್ರಕರಣ: ಸಿಸಿಟಿವಿ ದೃಶ್ಯಗಳು ಡಿಲೀಟ್?

Mainashree

ಬೆಂಗಳೂರು: ಅಳಿಯ ಡಿ.ಕೆ ರವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸಿಐಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಮನೆಯ ಡಿವಿಆರ್ ವಾಪಸ್ ನೀಡಿದ್ದು, ಕೆಲವು ದೃಶ್ಯಾವಳಿಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಹನುಮಂತರಾಯಪ್ಪ ಮಂಗಳವಾರ ಆರೋಪಿಸಿದ್ದಾರೆ.

"ಸಿಐಡಿ ಪೊಲೀಸರು ಡಿವಿಆರ್ ವಾಪಸ್ ನೀಡಿದ್ದಾರೆ, ಆದರೆ ಅದರಲ್ಲಿದ್ದ ಕೆಲ ದೃಶ್ಯಗಳು ಡಿಲೀಟ್ ಆಗಿವೆ. ಮಾರ್ಚ್ 16ರ ಬೆಳಗ್ಗೆ 10.30ರ ನಂತರದ ದೃಶ್ಯಗಳಿದ್ದು, ಮಾರ್ಚ್ 16ರ ಹಿಂದಿನ ದೃಶ್ಯಗಳು ಡಿಲೀಟ್ ಆಗಿವೆ' ಎಂದು ಹನುಮಂತರಾಯಪ್ಪ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ದೂರವಾಣಿ ಮೂಲಕ ಸಿಐಡಿ ಎಸ್ ಪಿ ಕುಮಾರಸ್ವಾಮಿ ಜೊತೆ ಮಾತನಾಡಿದೆ. ದೃಶ್ಯಗಳನ್ನು ಕಾಪಿ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ರು, ಆದರೆ ನಂತರ ಡಿವಿಆರ್ ಓಪನ್ ಆಗಲೇ ಇಲ್ಲ ಎಂದರು.

ಸಿಸಿಟಿವಿ ವಶಕ್ಕೆ ಪಡೆಯುವಾಗ ಮಹಜರು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಮಹಜರು ಮಾಡದಿದ್ರೆ ವಶಕ್ಕೆ ಹೇಗೆ ಪಡೆದಿರೆಂದು ನಾನು ಪ್ರಶ್ನಿಸಿದೆ ಎಂದು ಹನುಮಂತರಾಯಪ್ಪ ತಿಳಿಸಿದ್ದಾರೆ.

ಡಿ.ಕೆ ರವಿ ಆಫೀಸಿಗೆ ತೆರಳುತ್ತಿದ್ದ ದೃಶ್ಯ ಹಾಗೂ ಫೋನ್ ನಲ್ಲಿ ಮಾತನಾಡುತ್ತಿದ್ದ ದೃಶ್ಯಗಳು ಸೆರೆಯಾಗಿದ್ದವು. ಕನಿಷ್ಟ 20 ದಿನಗಳ ಬ್ಯಾಕಪ್ ಡಿವಿಆರ್ ನಲ್ಲಿ ಸಿಗಲಿದೆ. ಇದಕ್ಕಾಗಿ ಬೇರೆ ತಂತ್ರಜ್ಞಾನ ಮೊರೆ ಹೋಗಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಐಎಎಸ್ ಅಧಿಕಾರಿ ಡಿ.ಕೆ ರವಿ ಅವರು ತಮ್ಮ ಕೋರಮಂಗಲದ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಇದು ಅನುಮಾನಸ್ಪದ ಸಾವು ಎಂದು ಮಾವ ಹನುಮಂತರಾಯಪ್ಪ ಅವರು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಪೊಲೀಸರು ಹನುಮಂತರಾಯಪ್ಪ ಅವರ ಮನೆಯ ಸಿಸಿಟಿವಿ ಡಿವಿಆರ್ ವಶಕ್ಕೆ ತೆಗುದುಕೊಂಡಿದ್ದರು.

SCROLL FOR NEXT