ಪ್ರಧಾನ ಸುದ್ದಿ

ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಕಟಿಬದ್ಧ: ರಾಜನಾಥ್ ಸಿಂಗ್

Guruprasad Narayana

ನವದೆಹಲಿ: ಮತಾಂತರ ವಿರೋಧ ಕಾಯ್ದೆಯ ಬಗ್ಗೆ ಚರ್ಚೆಯಾಗಬೇಕು ಎಂದು ಕರೆ ಕೊಟ್ಟಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಧಾರ್ಮಿಕ ಮತಾಂತರವನ್ನು ಪ್ರಶ್ನಿಸಿದ್ದಾರೆ. ರಾಜ್ಯ ಅಲ್ಪಸಂಖ್ಯಾತ ಆಯೋಗಗಳ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ರಾಜನಾಥ್ ಸಿಂಗ್, ಅಲ್ಪಸಂಖ್ಯಾಂತರಿಗೆ ಪೂರ್ಣ ರಕ್ಷಣೆ ನೀಡುವುದಾಗಿ ಹೇಳಿರುವುದಲ್ಲದೆ, ಅಲ್ಪಸಂಖ್ಯಾಂತರನ್ನು ರಕ್ಷಿಸಲು ಹಾಗು ಅವರಲ್ಲಿನ ಅಭದ್ರ ಭಾವನೆಯನ್ನು ಹೋಗಲಾಡಿಸಲು ಸರ್ಕಾರ ಏನನ್ನೂ ಮಾಡಲು ಸಿದ್ಧವಿದೆ ಎಂದಿದ್ದಾರೆ.

"ಮಂತಾರಕ್ಕೆ ಇಳಿಯದೆ ಸಾಮಾಜಿಕ ಸೇವೆ ಮಾಡಲು ಸಾಧ್ಯವಿಲ್ಲವೇ? ಮತಾಂತರವನ್ನು ಪ್ರಚಾರ ಮಾಡದೆ ಎಲ್ಲ ಧರ್ಮಗಳು ಏಳಿಗೆ ಯಾಕೆ ಕಾಣಬಾರದು?" ಎಂದು ಸಮಾವೇಶದಲ್ಲಿ ರಾಜನಾಥ್ ಪ್ರಶ್ನಿಸಿದ್ದಾರೆ.

ಕೆಲವು ಹಿಂದು ಸಂಘಟನೆಗಳು ನಡೆಸುತ್ತಿರುವ ಘರ್ ವಾಪಸಿ ಮತ್ತು ಮತಾಂತರ ವಿರೋಧಿ ಕಾನೂನು ಪ್ರಚಾರದ ವಿವಾದಗಳ ನಡುವೆ, ಸಾಮಾನ್ಯವಾಗಿ ಬೇರೆ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರು ಮತಾಂತರ ವಿರೋಧಿ ಕಾನೂನುಗಳಿಗೆ ಬೇಡಿಕೆಯಿಡುತ್ತಾರೆ ಆದುದರಿಂದ ಭಾರತ ಕೂಡ ಈ ನಿಟ್ಟಿನಲ್ಲಿ ಚರ್ಚಿಸಬೇಕಿದೆ ಎಂದು ವಾದ ಮಂಡಿಸಿದ್ದಾರೆ.

ಭಾರತ ಎಲ್ಲ ಧರ್ಮಗಳನ್ನು ಗೌರವಿಸುವ ರಾಷ್ಟ್ರ ಮತ್ತು ಎಲ್ಲ ಧರ್ಮಗಳು ಒಟ್ಟಿಗೆ ಇರಲು ಇಲ್ಲಿ ಅವಕಾಶ ಇದೆ. ಇಲ್ಲಿ ಇಸ್ಲಾಂ ಧರ್ಮದ ಎಲ್ಲ ೭೨ ಪ್ರಭೇದಗಳು ಶಾಂತಿಯುತವಾಗಿ ನೆಲೆಸಿವೆ. ಅಲ್ಪಸಂಖ್ಯಾತರ ರಾಷ್ಟ್ರಭಕ್ತಿಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ಯಾವುದೇ ಧರ್ಮ ಮತ್ತೊಂದು ಧರ್ಮಕ್ಕಿಂದ ಮೇಲ್ಮಟ್ಟದ್ದು ಎಂದು ಹೇಳುವ ಯಾವುದೇ ಅವಶ್ಯಕತೆ ಇಲ್ಲ ಎಂದಿದ್ದಾರೆ.

SCROLL FOR NEXT