ಜೋಹಾನ್ಸ್ ಬರ್ಗ್: ಪ್ರಪಂಚದಾದ್ಯಂತ ತಮ್ಮ ಬರವಣಿಗೆಯಿಂದ ಮುಸ್ಲಿಮರನ್ನು ಕೆರಳಿಸಿದ್ದ ಭಾರತೀಯ ಮೂಲದ ವಿವಾದಾತ್ಮ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರನ್ನು ಪ್ರಶಂಸಿಸಿದ್ದಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದ ಲೇಖಕಿಯೊಬ್ಬರ ಮೇಲೆ ದುಷ್ಕರ್ಮಿಗಳು ತೀವ್ರ ಹಲ್ಲೆ ನಡೆಸಿರುವುದಲ್ಲದೆ ಬೈಗುಳದ ಸುರಿಮಳೆಗೆರೆದಿದ್ದಾರೆ.
ಡರ್ಬನ್ ನ ಶಾಲೆಯೊಂದರಲ್ಲಿ ಸಲ್ಮಾನ್ ರಷ್ದಿಯವರನ್ನು ಪ್ರಶಂಸಿಸಿದ್ದಕ್ಕೆ ಕಳೆದ ವಾರ ಜೈನಬ್ ಪ್ರಿಯ ದಾಲ ಅವರ ಮುಖದ ಮೇಲೆ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.