ಪ್ರಧಾನ ಸುದ್ದಿ

ಪೂರಕ ಅಂದಾಜು ಮಂಡನೆ

Lingaraj Badiger

ವಿಧಾನಸಭೆ: ರಾಜ್ಯ ಸರ್ಕಾರದ 2014-15ನೇ ಸಾಲಿನ ಮೂರನೇ ಹಾಗೂ ಅಂತಿಮ ಪೂರಕ ಅಂದಾಜುಗಳನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

4713.49 ಕೋಟಿ ರುಪಾಯಿ ಮೊತ್ತದ ಪೂರಕ ಅಂದಾಜುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಮಂಡಿಸಿದರು.

4713.49 ಕೋಟಿ ಮೊತ್ತದ ಪೂರಕ ಬಜೆಟ್‌ನಲ್ಲಿ 135.35 ಕೋಟಿ ಪ್ರಭೃತ ವೆಚ್ಚವಾಗಿದ್ದು, 4575.14 ಕೋಟಿ ಪುರಸ್ಕೃತ ವೆಚ್ಚವಾಗಿದೆ. 123.06 ಕೋಟಿ ಸಹ ಪುರಸ್ಕೃತವಾಗಬೇಕಿದ್ದು, ಇದನ್ನು ರಿಸರ್ವ್ ಫಂಡ್ ಠೇವಣಿಗಳಿಂದ ಭರಿಸಲಾಗುತ್ತದೆ.

ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 4590.43 ಕೋಟಿ. ಇದರಲ್ಲಿ 894.66 ಕೋಟಿ ಕೇಂದ್ರ ಸಹಾಯಕ್ಕೆ ಸಂಬಂಧಿಸಿವೆ. 175 ಕೋಟಿ ಇತರೆ ಜಮೆ ಹಾಗೂ 1283.39 ಕೋಟಿ ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿವೆ. ಆದ್ದರಿಂದ ನಿವ್ವಳ ಹೊರ ಹೋಗುವ ಮೊತ್ತ 2237.38 ಕೋಟಿ ಆಗಿದೆ ಎಂದು ತಿಳಿಸಲಾಗಿದೆ.

SCROLL FOR NEXT