ಪ್ರಧಾನ ಸುದ್ದಿ

ಸಿಎಂ ಸಮ್ಮುಖದಲ್ಲೇ ಸಾಹಿತಿ ಚಿದಾನಂದ ಮೂರ್ತಿಯನ್ನು ಎಳೆದಾಡಿದ ಪೊಲೀಸರು

Lingaraj Badiger

ಬೆಂಗಳೂರು: 84 ವರ್ಷದ ಹಿರಿಯ ಸಾಹಿತಿ ಹಾಗೂ ಸಂಶೋಧಕ ಚಿದಾನಂದ ಮೂರ್ತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಪೊಲೀಸರು ಎಳೆದಾಡಿ ಘಟನೆ ಬುಧವಾರ ವಿಧಾನಸೌಧದಲ್ಲಿ ನಡೆಯಿತು.

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಮಾರಂಭದಲ್ಲಿ ಸ್ಪೀಕರ್ ಕಾಗೋಡು ತಮ್ಮ ಹಾಗೂ ಸಿಎಂ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದರು.

ಸಮಾರಂಭದಲ್ಲಿ ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಒಂದೇ ಎಂಬ ವಾದ ಮಂಡಿಸಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಿದಾನಂದ ಮೂರ್ತಿ ಅವರು, ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ. ಇದಕ್ಕೆ ಸಾಕಷ್ಟು ಸಂಶೋಧನೆಗಳ ದಾಖಲೆ ಇದೆ. ಹಾಗಾಗಿ ಸರ್ಕಾರ ದೇವರ ದಾಸಿಮಯ್ಯ ಜಯಂತಿ ನಡೆಸುವುದು ಸರಿಯಲ್ಲ ಎಂದರು. ಇದಕ್ಕೆ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಸಹ ಧ್ವನಿಗೂಡಿಸಿದರು.

ಚಿದಾನಂದ ಮೂರ್ತಿ ಹಾಗೂ ಪ್ರಮೀಳಾ ನೇಸರ್ಗಿ ಅವರ ವಾದದಿಂದ ಸಿಟ್ಟಿಗೆದ್ದ ಕಾರ್ಯಕ್ರಮದ ಆಯೋಜಕರು, ಈ ಇಬ್ಬರನ್ನು ಬಲವಂತವಾಗಿ ಕಾರ್ಯಕ್ರಮದಿಂದ ಹೊರ ಹಾಕಿದ ಘನಟನೆ ನಡೆಯಿತು.

SCROLL FOR NEXT