ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಾಂಗ್ಲಾ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ಮೋದಿ

ಬಾಂಗ್ಲಾದೇಶದ ೪೪ ನೆ ಸ್ವಾತಂತ್ರ್ಯ ದಿನಾಚರಣೆಗೆ ಬಾಂಗ್ಲಾ ನಾಗರಿಕರಿಗೆ ಶುಭ ಕೋರಿರುವ ಭಾರತದ ಪ್ರಧಾನಿ ಮೋದಿ ಬಾಂಗ್ಲಾದೇಶ

ನರೇಂದ್ರ ಮೋದಿ
Guruprasad Narayana
Updated On : 26 Mar 2015, 3:15 am

ನವದೆಹಲಿ: ಬಾಂಗ್ಲಾದೇಶದ ೪೪ ನೆ ಸ್ವಾತಂತ್ರ್ಯ ದಿನಾಚರಣೆಗೆ ಬಾಂಗ್ಲಾ ನಾಗರಿಕರಿಗೆ ಶುಭ ಕೋರಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ "ಭಾರತದ ಮಹತ್ವದ ಗೆಳೆಯ" ಎಂದಿದ್ದಾರೆ.

"ಬಾಂಗ್ಲಾದೇಶದ ಜನರಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು. ಬಹಳ ಸಹನೆಯ ದೇಶ ಮತ್ತು ಭಾರತದ ಮಹತ್ತ್ವದ ಗೆಳೆಯ" ಎಂದು ಮೋದಿ ಅವರು ತಮ್ಮ ಕಿರುಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನಿ ಮಿಲಟರಿಯನ್ನು ಭಾರತದ ಸಹಾಯದಿಂದ ಸೋಲಿಸಿ ಇದೇ ದಿನ ೧೯೭೧ರಲ್ಲಿ ಬಾಂಗ್ಲಾ ದೇಶವನ್ನು ಸ್ವತಂತ್ರ ಎಂದು ಘೋಷಿಸಲಾಗಿತ್ತು.

ಡಿಸೆಂಬರ್ ೧೯೭೧ ರಲ್ಲಿ ಭಾರತ ಮತ್ತು ಪಾಕಿಸ್ತಾದ ಯುದ್ಧ ತೀವ್ರಗತಿಯಲ್ಲಿ ನಡೆದು, ಪಾಕಿಸ್ತಾನ ಪೂರ್ವ ಪ್ರದೇಶ ಎಂದು ಕರೆಯಲಾಗುತ್ತಿದ್ದ ಬಾಂಗ್ಲಾದೇಶವನ್ನು ಭಾರತದ ಪ್ರಧಾನಿ ಇಂದಿರಾಗಾಂಧಿ ಅವರ ಸಹಾಯದಿಂದ ಪಾಕಿಸ್ತಾನದಿಂದ ಮುಕ್ತಗೊಳಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement