ಪಾಟ್ನಾ: ರಾಜ್ಯದಲ್ಲಿ ಹಾಳಾಗುತ್ತಿರುವ ಶಿಕ್ಷಣ ಪದ್ಧತಿಯನ್ನು ವಿರೋಧಿಸಿ ಪ್ರತಿಭಟನ ನಿರತ ಎಬಿವಿಪಿ ಕಾರ್ಯಕರ್ತರು ಬಿಹಾರ ವಿಧಾನಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರಿಂದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಲಾಠಿಚಾರ್ಜ್ ಮಾಡಿದ್ದಾರೆ.
ಪೊಲೀಸರ ಲಾಠಿಚಾರ್ಜ್ ಮತ್ತು ಪ್ರತಿಭಟನಕಾರರ ಕಲ್ಲೆಸೆತದ ಘರ್ಷಣೆಯಿಂದ ವಿಧಾನಸಭೆಯ ಆರ್-ಬ್ಲಾಕಿನ ಹತ್ತಿರ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯ ಪ್ರದೇಶಕ್ಕೆ ಹೆಚ್ಚಿನ ಪೊಲೀಸ ಪಡೆಯೊಂದಿಗೆ ತೆರಳಿದ ಹಿರಿಯ ಪೋಲಿಸ್ ಸೂಪರ್ಇಂಟೆಂಡೆಂಟ್ ಜಿತೇಂದ್ರ ರಾಣ ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಯಶಸ್ವಿಯಾಗಿದ್ದಾರೆ.