ವಾಶಿಂಗ್ಟನ್: ರಾಷ್ಟೀಯ, ಪ್ರಾದೇಶಿಕ ಹಾಗೂ ಜಾಗತಿಕ ಭದ್ರತೆಗಾಗಿ ಪ್ರಬಲ ವೈಜ್ಞಾನಿಕ ಹಾಗು ತಂತ್ರಜ್ಞಾನ ಸಹಕಾರ ವೃದ್ಧಿಗೆ ಭಾರತ ಮತ್ತು ಅಮೇರಿಕಾ ಜಂಟಿಯಾಗಿ ಹಲವಾರು ರಕ್ಷಣಾ ತಂತ್ರಜ್ಞಾನ ಯೋಜನೆಗಳನ್ನು ಅಭಿವೃದ್ಧಿಪಡಿಸಲಿವೆ ಎಂದು ಅಮೇರಿಕ ಶ್ವೇತಭವನದ ಹಿರಿಯ ಅಧಿಕಾರಿಗಳು, ಅಮೇರಿಕಾ ಕಾನೂನು ಸಲಹೆಗಾರರಿಗೆ ತಿಳಿಸಿದ್ದಾರೆ.
"ಭಾರತ ಮತ್ತು ಅಮೇರಿಕಾ ನಡುವೆ ಸಂಬಂಧ ಬಲಪಡಿಸಿಕೊಳ್ಳಲು, ಪ್ರಬಲ ಭದ್ರತಾ ವೈಜ್ಞಾನಿಕ ಹಾಗು ತಂತ್ರಜ್ಞಾನ ಸಹಕಾರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದು ಒಂದು ಮಾರ್ಗ.
"ಈ ನಿಟ್ಟಿನಲ್ಲಿ ಭದ್ರತಾ ಇಲಾಖೆ ಮತ್ತು ಭಾರತಿಯ ಭದ್ರತಾ ಸಚಿವಾಲಯದ ಸಂಶೋಧಕರು ಹೊಸ ತಂತ್ರಜ್ಞಾನದ ಅಭಿವೃದ್ಧಿಗೆ ಮಾತುಕತೆ ನಡೆಸುತ್ತಿದ್ದಾರೆ" ಎಂದು ಶ್ವೇತಭನದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹನಿರ್ದೇಶಕ ಜೋ ಹ್ಯಾಂಡಲ್ಸ್ಮ್ಯಾನ್ ತಿಳಿಸಿದ್ದಾರೆ.
ಜನವರಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಗೆ ಅಮೇರಿಕಾ ಅಧ್ಯಕ್ಷ ಭೇಟಿ ನೀಡಿದ್ದ ಸಮಯದಲ್ಲಿ ೧೦ ವರ್ಷಗಳ ಭದ್ರತಾ ಸಂಬಂಧ ಒಪ್ಪಂದವನ್ನು ಭಾರತ ಮತ್ತು ಅಮೇರಿಕ ನವೀಕರಿಸಿಕೊಂಡಿದ್ದವು.