ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುರೇಶ್ ಭಾಯಿ ಪಟೇಲ್ 
ಪ್ರಧಾನ ಸುದ್ದಿ

ಸುರೇಶ್ ಭಾಯಿ ಮೇಲೆ ಹಲ್ಲೆ; ನಿವೃತ್ತ ಅಮೇರಿಕ ಪೊಲೀಸ್ ಮೇಲೆ ದೋಷಾರೋಪಣೆ

೫೭ ವರ್ಷದ ಭಾರತೀಯ ವಯೋವೃದ್ಧನ ಮೇಲೆ ಅತಿ ಹೆಚ್ಚಿನ ಬಲಪ್ರಯೋಗ ಮಾಡಿ ಅವರ ದೇಹವನ್ನು ಪಾರ್ಶ್ವ ನಿಷ್ಕ್ರಿಯಗೊಳಿಸಿದ ಆರೋಪ

ವಾಶಿಂಗ್ಟನ್: ೫೭ ವರ್ಷದ ಭಾರತೀಯ ವಯೋವೃದ್ಧನ ಮೇಲೆ ಅತಿ ಹೆಚ್ಚಿನ ಬಲಪ್ರಯೋಗ ಮಾಡಿ ಅವರ ದೇಹವನ್ನು ಪಾರ್ಶ್ವ ನಿಷ್ಕ್ರಿಯಗೊಳಿಸಿದ ಆರೋಪ ಹೆದರಿಸುತ್ತಿರುವ ಅಮೇರಿಕಾ ಪೋಲಿಸ್ ಅಧಿಕಾರಿಯ ಮೇಲೆ ನಾಗರಿಕ ಹಕ್ಕುಗಳ ಉಲ್ಲಂಘನೆಗೆ ಅಧಿಕೃತ ದೋಷಾರೋಪಣೆಯನ್ನು ಯು ಎಸ್ ಫೆಡರಲ್ ಮಾಡಿದೆ. ಈಗ ಅಧಿಕಾರಿ ೧೦ ವರ್ಷದವರೆಗೆ ಜೈಲು ಸಜೆ ಅನುಭವಿಸುವ ಸಾಧ್ಯತೆ ಇದೆ.

"ಸುರೇಶ್ ಭಾಯಿ ಅವರನ್ನು ನೆಲಕ್ಕೆ ತಳ್ಳಿದ್ದರಿಂದ ಅವರ ದೇಹ ಪಾರ್ಶ್ವ ನಿಷ್ಕ್ರಿಯವಾದ ಆರೋಪದ ಮೇಲೆ ಫೆಡರಲ್ ನ್ಯಾಯಮೂರ್ತಿಗಳು ಎರಿಕ್ ಪಾರ್ಕರ್ ಅವರ ಮೇಲೆ ಅಧಿಕೃತ ದೋಷಾರೋಪಣೆ ಮಾಡಿದ್ದಾರೆ" ಎಂದು ಉಪ ಅಟಾರ್ನಿ ಜನರಲ್ ವನಿತಾ ಗುಪ್ತಾ ಹಾಗೂ ಅಲಬಾಮಾದ ಉತ್ತರ ಜಿಲ್ಲೆಯ ಅಮೇರಿಕಾ ಅಟಾರ್ನಿ ಜನರಲ್ ಜಾಯ್ಸ್ ವಾನ್ಸ್ ಎರಡು ಪುಟದ ದೋಷಾರೋಪಣೆಯಲ್ಲಿ ತಿಳಿಸಿದ್ದಾರೆ.

ಮೊಮ್ಮೊಗ ಹುಟ್ಟಿದ ಖುಷಿಯಲ್ಲಿ ತಮ್ಮ ಮಗ ಮತ್ತು ಸೊಸೆಗೆ ಸಹಾಯ ಮಾಡಲು ಅಮೆರಿಕಾಕ್ಕೆ ಬಂದಿದ್ದ ಸುರೇಶ್ ಭಾಯಿ ಪಟೇಲ್ ಅವರು ರಸ್ತೆಯಲ್ಲಿ ನಡೆದು ಹೋಗುವಾಗ ಪಾರ್ಕರ್ ಮತ್ತು ಇನ್ನಿಬ್ಬರು ಪೊಲೀಸರೊಂದಿಗೆ ಪಟೇಲ್ ಮೇಲೆ ತೀವ್ರ ಹಲ್ಲೆ ನಡೆಸಿದ್ದರು. ಇದರಿಂದ ಪಟೇಲ್ ಅವರಿಗೆ ತೀವ್ರ ಗಾಯವಾಗಿತ್ತು.

ತನಿಖೆ ಕೈಗೆತ್ತುಕೊಂಡಿದ್ದ ಎಫ್ ಬಿ ಐ, ಪಾರ್ಕರ್ ಅವರನ್ನು ಮ್ಯಾಡಿಸನ್ ಪೋಲಿಸ್ ಪಡೆಯಿಂದ ವಜಾ ಮಾಡಿತ್ತು. ಅಲ್ಲದೆ ಅಲಬಾಮಾ ಗವರ್ನರ್ ರಾಬರ್ಟ್ ಬೆಂಟ್ಲಿ ಭಾರತ ಸರ್ಕಾರದ ಕ್ಷಮೆ ಕೋರಿದ್ದರು. ಪ್ರಾಮಾಣಿಕ ಮತ್ತು ಶೀಘ್ರ ತನಿಖೆಗೆ ಪಟೇಲ್ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪಟೇಲ್ ಅವರ ಅಟಾರ್ನಿ ಹ್ಯಾಂಕ್  ಶೆರ್ರಾಡ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ದಸರಾ ಉದ್ಘಾಟನೆ ಮಾಡುವಷ್ಟು ದೊಡ್ಡವನು ನಾನಲ್ಲ, ಮಹನೀಯರು ಹಚ್ಚಿದ ದೀಪ ಆರದಿರಲಿ ಎಂದು ಪ್ರಾರ್ಥಿಸಲಿಕ್ಕೆ ಬಂದಿದ್ದೇನೆ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ