ಪ್ರಧಾನ ಸುದ್ದಿ

ಮೇಕೆದಾಟು ಯೋಜನೆ ತಡೆಗೆ ಮೋದಿ ಮೊರೆ ಹೋದ ಎಂಡಿಎಂಕೆ

Guruprasad Narayana

ಕೊಯಂಬತ್ತೂರ್ : ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟುವುದರಿಂದ ಕರ್ನಾಟಕವನ್ನು ತಡೆಯುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜವಾಬ್ದಾರಿ ಎಂದಿದೆ ಎಂಡಿಎಂಕೆ ಪಕ್ಷ. ಇದು ತಮಿಳುನಾಡು ಸರ್ಕಾರದ ಹಿತಾಸಕ್ತಿಯ ಮೇಲೆ ಪರಿಣಾಮ ಬೀರಲಿದೆ ಎಂದು ದೂರಿದ್ದಾರೆ.

ಈ ವಿಷಯದಲ್ಲಿ ಕರ್ನಾಟಕದ ಪಕ್ಷಗಳು ಮತಬ್ಯಾಂಕ್ ರಾಜಕೀಯ ಮಾಡುತ್ತಿವೆ ಎಂದು ದೂರಿನ ಎಂಡಿಎಂಕೆ ಪ್ರಧಾನ ಕಾರ್ಯದಶಿ ವೈಕೋ, ತಮಿಳುನಾಡಿನ ಜನ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುವ ಮೊದಲು ಪ್ರಧಾನಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಡ ಹೇರಿದ್ದಾರೆ.

ರಾಜ್ಯದ ಲೋಕಸಭಾ ಸದಸ್ಯರು ಮತ್ತು ಕೇಂದ್ರ ಸಚಿವರನ್ನು ಗಣನೆಗೆ ತೆಗೆದುಕೊಂಡು ಕಾವೇರಿ ಪ್ರಕರಣದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದು ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಕಾಚಿವ ಸದಾನಂದ ಗೌಡ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವೈಕೋ, ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಮೋದಿ ಅವರ ಜವಾಬ್ದಾರಿ ಎಂದಿದ್ದಾರೆ.

ಈ ಪ್ರಕರಣದಲ್ಲಿ ತಮಿಳುನಾಡಿನ ಎಲ್ಲ ಪಕ್ಷಗಳು ಒಗ್ಗೂಡಿ ಮುತ್ಸದ್ಧಿತನ ಮೆರೆಯುತ್ತಿರುವ ನಡೆಯನ್ನು ಪ್ರಸಂಶಿಸಿದ ವೈಕೋ, ತಮಿಳು ನಾಡು ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಡುತ್ತಿದೆ ಎಂದಿದ್ದಾರೆ.

SCROLL FOR NEXT