ಲಂಡನ್: ಜನಾಂಗೀಯ ನಿಂದನೆ ಎಂದು ಊಹಿಸಲಾದ ಪ್ರಕರಣದಲ್ಲಿ ಸಿಖ್ ಪುರುಷನೊಬ್ಬನಿಗೆ ತೀವ್ರ ಥಳಿಸಿದ ಘಟನೆ ಬ್ರಿಟಿಶ್ ನಗರ ಬರ್ಮಿಂಗ್ ಹ್ಯಾಮ್ ನಲ್ಲಿ ಜರುಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಥಳಿತದ ವಿಡಿಯೋ ಇಂಟರ್ನೆಟ್ ನಲ್ಲಿ ವ್ಯಾಪಕವಾಗಿ ಹರಡಿದೆ.
ಬರ್ಮಿಂಗ್ ಹ್ಯಾಮ್ ನ ಬ್ರಾಡ್ ರೋಡಿನಲ್ಲಿ ನಡೆದಿರುವ ಈ ಆಘಾತಕಾರಿ ಘಟನೆಯಲ್ಲಿ ಒಬ್ಬ ಮನುಷ್ಯ ಸಿಖ್ ನಾಗರಿಕನಿಗೆ ಮನಬಂದಂತೆ ಥಳಿಸುತ್ತಿದ್ದು, ಸಂತ್ರಸ್ತ ರಕ್ಷಣೆಗಾಗಿ ಮುಖ ಮುಚ್ಚಿಕೊಂಡಿರುವ ದೃಶ್ಯಗಳು ಕಾಣುತ್ತವೆ. ಇದನ್ನು ನೋಡಲು ಜನರು ನೆರಿದಿದ್ದರೂ ಯಾರೂ ಸಹಾಯಕ್ಕೆ ಮುಂದಾಗಿಲ್ಲ ಎಂದು ಬರ್ಮಿಂಗ್ ಹ್ಯಾಮ್ ಮೇಲ್ ವರದಿ ಮಾಡಿದೆ.
"ಇದು ಧಾರ್ಮಿಕ ವಿಷಮ ಭಾವನೆಯಿಂದ ನಡೆದ ಕೃತ್ಯ ಎಂದು ಹೇಳಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಯನ್ನು ನಡೆಸಲಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತನಿಗೆ ಮುಂದೆ ಬಂದು ಪೊಲೀಸರಿಗೆ ಎಲ್ಲ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಈ ಘಟನೆಯಿಂದ ಇಂಗ್ಲೆಂಡಿನ ಸಿಖ್ ಸಮುದಾಯ ಕುಪಿತಗೊಂಡಿದೆ ಎಂದು ತಿಳಿದುಬಂದಿದೆ.
ಸೂಚನೆ: ಈ ಕೆಳಗಿನ ವಿಡಿಯೋ ಹಿಂಸಾತ್ಮಕವಾಗಿದ್ದು, ಕೆಲವರಿಗೆ ಅಹಿತವಾಗಿರಬಹುದಾಗಿದೆ. ಆದುದರಿಂದ ಬಳಕೆದಾರರ ವಿವೇಕಾನುಸಾರ ಇದನ್ನು ನೋಡಬೇಕೆ ಅಥವೇ ನೋಡಬಾರದೆ ಎಂಬುದನ್ನು ನಿಶ್ಚಯಿಸಿಕೊಳ್ಳಬೇಕಾಗಿ ವಿನಂತಿಸಲಾಗಿದೆ.