ಬೆಂಗಳೂರು: ಒಂದು ಕಡೆ ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣ ತನಿಖೆ ಹಂತದಲ್ಲಿದ್ದರೇ, ಮತ್ತೊಂದು ಕಡೆ ರವಿ ಅವರ ಮಾವ ಹನುಮಂತರಾಯಪ್ಪ ಅವರ ವಿರುದ್ಧ ಎನ್ ಜಿಒ ದೂರು ದಾಖಲಿಸಿದೆ.
ಸಾಕ್ಷ್ಯಾಧಾರಗಳನ್ನು ಹನುಮಂತರಾಯಪ್ಪ ನಾಶ ಪಡೆಸಿರುವ ಸಾಧ್ಯತೆಗಳಿದ್ದು ಅವರನ್ನು ತನಿಖೆಗೊಳಪಡಿಸಿ ಎಂದು ವಿಶ್ವ ಕನ್ನಡ ಸಮಾಜ ಸರ್ಕಾರೇತರ ಸಂಸ್ಥೆ ಬೆಂಗಳೂರು ಪೊಲೀಸರಲ್ಲಿ ಪ್ರಕರಣ ದಾಖಲಿಸಿದೆ.
ಸಿಐಡಿ ಪೊಲೀಸರು ಸಿಸಿಟಿವಿಯಲ್ಲಿರುವ ಕೆಲವು ದೃಶ್ಯಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಹನುಮಂತರಾಯಪ್ಪ ಅವರ ಈ ಹೇಳಿಕೆ ಅನೇಕ ಅನುಮಾನಗಳನ್ನು ಹುಟ್ಟಿಸಿದೆ. ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿವೆ. ಅವರು ಸಾಕ್ಷಿಗಳನ್ನು ನಾಶಪಡಿಸಲು ಯತ್ನಿಸಿರುವ ಸಾಧ್ಯತೆಗಳಿವೆ ಎಂದು ಎನ್ ಜಿಒ ಅಭಿಪ್ರಾಯಪಟ್ಟಿದೆ.
ಸಿಐಡಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತನಿಖಾ ಏಜೆನ್ಸಿಗೆ ಹೇಳದೇ ಹನುಮಂತರಾಯಪ್ಪ ಮುಚ್ಚಿಟ್ಟಿದ್ದರು, ಈ ಸಂಬಂಧ ಅವರು ಯಾವುದೇ ವರದಿ ನೀಡಿಲ್ಲ.
ರವಿ ಮನೆಯ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ ಎಂದು ಹೇಳುವ ಹನುಮಂತರಾಯಪ್ಪ ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಏಕೆ ದಾಖಲಿಸಿಲ್ಲ, ಇಡೀ ರಾಜ್ಯದ ಜನತೇ ರವಿ ಸಾವಿನ ಕುರಿತು ಮುಕ್ತ ತನಿಖೆಯಾಗಬೇಕು ಎಂದು ಹೇಳುತ್ತಿದ್ದರೆ, ಹನುಮಂತರಾಯಪ್ಪ ಈ ವಿಷಯವನ್ನು ಬಾಯ್ಬಿಬಿಡದೇ, ಸುಮ್ಮನ್ನೇ ಇದ್ದು, ಕೆಲವು ದಿನಗಳ ನಂತರ ಈ ರೀತಿ ಪೊಲೀಸರ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಹನುಮಂತರಾಯಪ್ಪ ಅವರ ಈ ನಡೆ ಅನುಮಾನ ಮೂಡಿಸಿದೆ ಎಂದು ಸಂಸ್ಥೆ ಆರೋಪಿಸಿದೆ