ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ತಮ್ಮ ಅವಧಿ ಮುಗಿದಿದೆ ಎಂದ ಎಎಪಿ ನಿರ್ಧಾರವನ್ನು ಪ್ರಶ್ನಿಸಿದ ರಾಮದಾಸ್

ಎಎಪಿ ಹೊಸ ಆಂತರಿಕ ಲೋಕಪಾಲ್ ಸಮಿತಿಯನ್ನು ರಚಿಸಿದ ಕೆಲವೇ ದಿನಗಳು ಕಳೆದ ಮೇಲೆ ಈಗ ಮಾಜಿ ನೌಕಾ ಅಧ್ಯಕ್ಷ ರಾಮದಾಸ್ ಈ ನಡೆಯನ್ನು ಪ್ರಶ್ನಿಸಿ,

ನವದೆಹಲಿ: ಎಎಪಿ ಹೊಸ ಆಂತರಿಕ ಲೋಕಪಾಲ್ ಸಮಿತಿಯನ್ನು ರಚಿಸಿದ ಕೆಲವೇ ದಿನಗಳು ಕಳೆದ ಮೇಲೆ ಈಗ ಮಾಜಿ ನೌಕಾ ಅಧ್ಯಕ್ಷ ರಾಮದಾಸ್ ಈ ನಡೆಯನ್ನು ಪ್ರಶ್ನಿಸಿ, ತಮ್ಮ ಅವಧಿ ನವೆಂಬರ್ ೨೦೧೬ರವರೆಗೂ ಇದೆ ಎಂದಿದ್ದಾರೆ.

೨೦೦೪ರ ರಾಮನ್ ಮ್ಯಾಗ್ಸಸೆ ಶಾಂತಿ ಪ್ರಶಸ್ತಿ ವಿಜೇತ ರಾಮದಾಸ್ ಎಎಪಿ ನಿರ್ಧಾರದಿಂದ ನನಗೆ ಆಶ್ಚರ್ಯವಾಗಿದೆ, ಗೊಂದಲವಾಗಿದೆ ಎಂದಿದ್ದಾರೆ. ನನ್ನ ಅವಧಿ ಮುಗಿದಿದೆ ಎಂದಾದರೆ ದೆಹಲಿ ವಿಧಾನಸಭಾ ಚುನಾವಣಾ ವೇಳೆಯಲ್ಲಿ ಆಂತರಿಕ ಲೋಕಪಾಲ್ ಆಗಿ ಕೆಲಸ ಮುಂದುವರೆಸಲು ಅವಕಾಶ ನೀಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

"ಈ ಮೊದಲೇ ಸೂಚನೆ ನೀಡಿದ್ದರೆ... ನನ್ನ ಅವಧಿ ಮುಗಿದಿದೆಯೆಂದು, ನಾನು ನನಗೆ ನೀಡಿದ್ದ ಕೆಲಸಗಳನ್ನು ಮಾಡುತ್ತಿರಲಿಲ್ಲ- ಈಗ ಅವುಗಳನ್ನು ಅಸಿಂಧು ಎಂದು ಕೂಡ ಹೇಳಬಹುದು" ಎಂದು ರಾಮದಾಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಜನವರಿ ೨೦೧೫ ರಲ್ಲಿ ನೀವು ರಾಷ್ಟ್ರೀಯ ಕಾರ್ಯದರ್ಶಿಯಾಗಿ ೧೨ ವಿಧಾನಸಭಾ ಅಭ್ಯರ್ಥಿಗಳ ವಿರುದ್ಧ ಇದ್ದ ದೂರುಗಳನ್ನು ಲೋಕಪಾಲನಾದ ನನಗೆ ತನಿಖೆಗಾಗಿ ಕಳುಹಿಸಿದ್ದನ್ನು ನೀವು ನೆನಪಿಸಿಕೊಳ್ಳಿ.

"ನಾನು ಅವರು ನಾಮಪತ್ರ ಸಲ್ಲಿಸುವುದಕ್ಕೂ ಮುಂಚೆ ಅವರ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಿದ್ದೆ" ಎಂದು ಅವರು ತಿಳಿಸಿದ್ದಾರೆ.

"ಪಕ್ಷದ ಸಂವಿಧಾನದ ಪ್ರಕಾರ ಲೋಕಪಾಲನಾಗಿ ನನ್ನ ಅವಧಿ ಇದು ರಚನೆಯಾದ ನವೆಂಬರ್ ೨೦೧೩ ರಿಂದ ೩ ವರ್ಷದವರೆಗೂ ಇರುತ್ತದೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video