ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇ ೧೪ ರಿಂದ ಮೇ ೧೯ರವರೆಗೆ ಮೂರು ದೇಶಗಳ ಪ್ರವಾಸ ಮಾಡಲಿದ್ದಾರೆ. ಈ ಸಮಯದಲ್ಲಿ ಮೋದಿ ಚೈನಾ, ಮಂಗೋಲಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳಿಗೆ ಭೇಟಿ ನಿಡಲಿದ್ದಾರೆ.
ಚೈನಾದಲ್ಲಿ ಮೇ ೧೪ ರಿಂದ ೧೬ರವೆರೆಗೆ ಕ್ಸಿಯಾನ್, ಬೀಜಿಂಗ್ ಮತ್ತು ಶಾಂಗೈಗೆ ಭೇಟಿ ನೀಡಲಿದ್ದಾರೆ.
ಆಯಾ ದೇಶಗಳ ಅಧ್ಯಕ್ಷರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು ಸಾಂಸ್ಕೃತಿಕ ಹಾಗು ವ್ಯವಹಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಚೈನಾದಲ್ಲಿ ಭಾರತೀಯ ಸಮುದಾಯ ಆಯೋಜಿಸಿರುವ ಕಾರ್ಯಕ್ರಮದಲ್ಲೂ ಪ್ರಧಾನಿ ಭಾಗವಹಿಸಲಿದ್ದಾರೆ.
ಮೇ೧೭ರಂದು ಮೋದಿ ಮಂಗೋಲಿಯಗೆ ಭೇಟಿ ನೀಡಲಿದ್ದು, ಇದು ಭಾರತೀಯ ಪ್ರಧಾನಿಯೊಬ್ಬರು ಮಂಗೋಲಿಯಾಗೆ ಪ್ರವಾಸ ಮಾಡಿದ ಮೊದಲನೆಯ ಸಂದರ್ಭ.
ನಂತರ ಮೋದಿ ಅವರು ಮೇ ೧೮ ಮತ್ತು ೧೯ರಂದು ಕೊರಿಯಾ ರಿಪಬ್ಲಿಕ್ ರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಗ್ಯೇನ್-ಹೇ ಅವರೊಂದಿಗೆ ಚರ್ಚೆ ನಡೆಸಲಿದ್ದು ಸಿಯೋಲ್ ನಲ್ಲಿ ಪ್ರಮುಖ ಉದ್ದಿಮೆದಾರರನ್ನು ಭೇಟಿ ಮಾಡಲಿದ್ದಾರೆ ಎಂದು ಮಂಗಳವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.