ನವದೆಹಲಿ: ಭೂಗತ ದೊರೆ ದಾವೂದ್ ಇಬ್ರಾಹಿಮ್ ಎಲ್ಲಿದ್ದಾನೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲ, ಅವನನ್ನು ಪತ್ತೆ ಹಚ್ಚಿದ ನಂತರ ಅವನನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
೧೯೯೩ ರ ಮುಂಬೈ ಸರಣಿ ಬಾಂಬ್ ಸ್ಪೋಟದಲ್ಲಿನ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಮ್ ಸೆರೆಹಿಡಿಯಲು ಕೆಂಪು ನಿಶಾನೆ ನೋಟಿಸ್ ಹೊರಡಿಸಲಾಗಿದೆ ಎಂದು ಗೃಹ ಸಚಿವಾಲಯದ ರಾಜ್ಯ ಸಚಿವ ಹರಿಭಾಯಿ ಪ್ರತಿಭಾಯಿ ಚೌಧರಿ ತಿಳಿಸಿದ್ದಾರೆ.
"ವಿಶ್ವ ಸಂಸ್ಥೆಯ ಭದ್ರತಾ ಮಂಡಲಿ ಕೂಡ ದಾವೂದ್ ವಿರುದ್ಧ ವಿಶೇಷ ನೋಟಿಸ್ ಹೊರಡಿಸಿದೆ. ಅವನನ್ನು ಇನ್ನು ಪತ್ತೆ ಹಚ್ಚಲಾಗಿಲ್ಲ. ಪತ್ತೆ ಹಚ್ಚಿದ ನಂತರ ಅವನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು" ಎಂದು ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ದಾವೂದ್ ಪಾಕಿಸ್ತಾನ ರಕ್ಷಣಾ ಇಲಾಖೆಯ ಸಹಾಯದೊಂದಿಗೆ ಆ ದೇಶದಲ್ಲೇ ಬದುಕುತ್ತಿದ್ದಾನೆ ಎಂದು ಸರ್ಕಾರ ಇಲ್ಲಿಯವರೆಗೂ ಕೇಳಿಕೊಂಡು ಬರುತ್ತಿತ್ತು.
ಭಾರತಕ್ಕೆ ಅಗತ್ಯವಿರುವ ಈ ಪಲಾಯನವಾದಿ ದೇಶದ್ರೋಹಿಯ ವಿರುದ್ಧ ಪುರಾವೆಗಳನ್ನು ಪಾಕಿಸ್ತಾನಕ್ಕೆ ನೀಡಿ ಅವನ ಇರುವಿಕೆಯನ್ನು ಪತ್ತೆ ಹಚ್ಚುವಂತೆ ಪಾಕಿಸ್ತಾನಕ್ಕೆ ಸರ್ಕಾರ ತಿಳಿಸಿತ್ತು.
ಈ ದೇಶದ್ರೋಹಿ ಕಂಡುಬಂದರೆ ಭಾರತಕ್ಕೆ ಗಡಿಪಾರು ಮಾಡುವಂತೆ ಸರ್ಕಾರ ಪಾಕಿಸ್ತಾನ ತಿಳಿಸಿರುವುದಲ್ಲದೆ, ಇತರ ದೇಶಗಳಿಗೂ ಬೇರೆ ಇತರ ದೇಶದ್ರೋಹಿಗಳನ್ನು ಭಾರತದ ವಶಕ್ಕೆ ನೀಡಲು ಕೇಳಲಾಗಿದೆ ಎಂದು ಚೌದರಿ ಇಂದು ತಿಳಿಸಿದ್ದಾರೆ.