ಪ್ರಧಾನ ಸುದ್ದಿ

ತಿಮಿಂಗಿಲ ಬಾಡೂಟ: ಬಾಣಸಿಗನಿಗೆ ಶಿಕ್ಷೆ

Guruprasad Narayana

ಲಾಸ್ ಏಂಜಲೀಸ್: ಸಾಂಟಾ ಮೋನಿಕಾ ಹೋಟೆಲ್ ನ ಬಾಣಸಿಗ ಕಾನೂನುಬಾಹಿರವಾಗಿ ತಿಮಿಂಗಿಲದ ಬಾಡೂಟ ಬಡಿಸಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದಾನೆ.

ಬಾಣಸಿಗ ಸುಸುಮು ಊಡನಿಗೆ ಕೆಲಸ ತೊರೆದು, ೫೦೦೦ ಡಾಲರ್ ದಂಡ ಕಟ್ಟಿ ಹಾಗೂ ೨೦೦ ಘಂಟೆಗಳ ಕಾಲ ಸಮುದಾಯದ ಕೆಲಸವನ್ನು ಮಾಡಲು ಆದೇಶಿಸಲಾಗಿದೆ. ಸಮುದ್ರ ಸಸ್ತನಿ ಸಂರಕ್ಷಣಾ ಕಾಯ್ದೆಯನ್ನು ಮೀರಿದ್ದಕ್ಕೆ ತಪ್ಪಿತಸ್ಥ ಎಂದು ಅವನನ್ನು ಪರಿಗಣಿಸಲಾಗಿದೆ.

'ದ ಕೋವ್' ಸಾಕ್ಷ್ಯಚಿತ್ರದ ನಿರ್ದೇಶಕರು ರಹಸ್ಯವಾಗಿ ಐದು ವರ್ಷದ ಹಿಂದೆ ಸುಶಿ ಹೋಟೆಲ್ ನಲ್ಲಿ ಸಂರಕ್ಷಣೆಯಲ್ಲಿರುವ ಸೀಯ್ ತಿಮಿಂಗಿಲದ ಮಾಂಸದೂಟವನ್ನು ಬಡಿಸುವುದನ್ನು ಸೆರೆ ಹಿಡಿದಿದ್ದರು. ಆಗ ಇದರ ತನಿಖೆ ಮಾಡಲಾಗಿತ್ತು.

ಈಗ ಆ ಹೋಟೆಲ್ ಮುಚ್ಚಲಾಗಿದ್ದು, ಮಾಲೀಕನಿಗೆ ಕೂಡ ದಂಡ ಹಾಕಲಾಗಿದೆ. ಮತ್ತೊಬ್ಬ ಬಾಣಸಿಗನ ವಿಚಾರಣೆ ಪ್ರಗತಿಯಲ್ಲಿದೆ.

SCROLL FOR NEXT