ಕೊಯಂಬತ್ತೂರು: ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳವಾರ ಐದು ಎಡ ಪಕ್ಷದ ತೀವ್ರವಾದಿಗಳ ವಿಚಾರಣೆ ನಡೆಸಿದ್ದಾರೆ. ಇವರನ್ನು ನಗರದ ಹೊರವಲಯದಲ್ಲಿ ಸೋಮವಾರ ಬಂಧಿಸಲಾಗಿತ್ತು.
ಮೂಲಗಳ ಪ್ರಕಾರ ಕೊಚಿ ಮೂಲದ ಮಾವೋವಾದಿ ಮುಖಂಡ ಆರ್ ರೂಪೇಶ್ ಅಲಿಯಾಸ್ ಪ್ರವೀಣ್(೪೫), ಅವನ ಪತ್ನಿ ಆರ್ ಶೈನಾ ಅಲಿಯಾಸ್ ಶಿನಿ(೪೨), ಜೆ ಅನೂಪ್(೩೧), ಸಿ ವೀರಮಣಿ ಅಲಿಯಾಸ್ ಈಶ್ವರನ್(೬೦) ಹಾಗೂ ಸಿ ಕಣ್ಣನ್(೪೬) ಇವರುಗಳನ್ನು ಆಂಧ್ರ ಪೊಲೀಸರು ಸೆರೆಹಿಡಿದಿದ್ದರು. ಇವರ ಸಹಚರ ಮಲ್ಲ ರಾಜ ರೆಡ್ಡಿಯನ್ನು ಇದಕ್ಕೂ ಮೊದಲು ಆಂಧ್ರ ಪೊಲೀಸರು ಸೆರೆ ಹಿಡಿದಿದ್ದರು.
ರೂಪೇಶ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಲು ಹೋಗುತ್ತಿರುವಾದ ಮಾರ್ಗ ಮಧ್ಯದಲ್ಲಿ ರೆಡ್ಡಿಯನ್ನು ಸೆರೆಹಿಡಿಯಲಾಗಿತ್ತು. ಸಿಪಿಐ(ಮಾವೋವಾದಿ) ಪಕ್ಷದ ದಕ್ಷಿಣ ಭಾಗದ ಮುಖಂಡ ಇವನು ಎಂದು ಪೊಲೀಸರು ಹೇಳಿದ್ದಾರೆ.
ಕೇರಳಾಗೆ ಹೆಚ್ಚು ಅಗತ್ಯವಿದ್ದ ರೂಪೇಶ್ ಅವರನ್ನು ಕೋರ್ಟಿಗೆ ಕರೆತಂದಾಗ ಮಾವೋವಾದಿ ಪರ ಘೋಷಣೆಗಳನ್ನು ಕೂಗಿದ್ದನೆ. ಹಾಗೆಯೇ ನ್ಯಾಯಾಧೀಶ ಎಂ ಪಿ ಸುಬ್ರಮಣಿಯನ್ ಅವರ ಎದುರು ಆಂಧ್ರ ಪ್ರದೇಶ ಪೊಲೀಸರು ನನ್ನನ್ನು ಅಪಹರಿಸಿದ್ದಾರೆ ಎಂದು ಕೂಡ ಹೇಳಿದ್ದಾನೆ.