ಪ್ರಧಾನ ಸುದ್ದಿ

ಇರಾಕ್ ಜೈಲು ಪರಾರಿ ಯತ್ನ; ೩೬ ಜನ ಸಾವು; ೪೦ ಖೈದಿಗಳು ಪರಾರಿ

Guruprasad Narayana

ಬಾಗ್ದಾದ್: ಪೂರ್ವ ಇರಾಕಿನ ಜೈಲೊಂದರಿಂದ, ಭಯೋತ್ಪಾದನಾ ಆರೋಪವನ್ನು ಎದುರಿಸುತ್ತಿರುವವರು ಸೇರಿದಂತೆ ೪೦ ಜನ ಖೈದಿಗಳು ಗಲಭೆಯ ನಡುವೆ ಪರಾರಿಯಾಗಿದ್ದಾರೆ. ಈ ಗಲಭೆಯಲ್ಲಿ ಕನಿಷ್ಠ ೬ ಪೊಲೀಸ್ ಅಧಿಕಾರಿಗಳು ಹಾಗೂ ೩೦ ಜನ ಖೈದಿಗಳು ಮೃತಪಟ್ಟಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ದಿಯಾ ಪ್ರಾಂತ್ಯದ ಖಾಲಿಸ್ ಜೈಲಿನಲ್ಲಿ ನಡೆದ ಈ ಜೈಲು ಪರಾರಿ ಘಟನೆಯ ಬಗ್ಗೆ ಭಿನ್ನ ವರದಿಗಳು ಲಭ್ಯವಾಗಿದೆ. ಮತ್ತೊಂದು ವರದಿಯ ಪ್ರಕಾರ ೧೨ ಜನ ಪೊಲೀಸರು ಮತ್ತು  ೫೧ ಜನ ಖೈದಿಗಳು ಮೃತಪಟ್ಟಿದ್ದು ಸುಮಾರು ೨೦೦ ಖೈದಿಗಳು ಪರಾರಿಯಾಗಿದ್ದಾರೆ. ಇದನ್ನು ಹೆಸರು ಹೇಳಲಿಚ್ಚಿಸದ ಪೋಲಿಸ್ ಅಧಿಕಾರಿಗಳು ಧೃಢಪಡಿಸಿದ್ದಾರೆ.

ಬೆಳಗ್ಗೆ ಜೈಲು ಅಧಿಕಾರಿಗಳೊಂದಿಗೆ ಖೈದಿಗಳು ನಡೆಸಿದ ಜಗಳ ವಿಕೋಪಕ್ಕೆ ತಿರುಗಿ, ಪೋಲೀಸರ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿದ್ದರಿಂದ ಗಲಭೆ ಉಂಟಾಯಿತು ಎಂದು ಸಚಿವ ಬ್ರಿಗೇಡಿಯರ್ ಜನರಲ್ ಸಾದ್ ಮಾನ್ ಇಬ್ರಾಹಿಮ್ ತಿಳಿಸಿದ್ದಾರೆ. ಬಾಗ್ದಾದಿನಿಂದ ೮೦ ಕಿಮೀ ದೂರದಲ್ಲಿರುವ ಈ ಜೈಲಿನಲ್ಲಿ ನೂರಾರು ಖೈದಿಗಳಿದ್ದರು ಎನ್ನಲಾಗಿದೆ.

 

SCROLL FOR NEXT