ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

1998 ಪೋಖ್ರಾನ್ ಪರಮಾಣು ಪರೀಕ್ಷೆ: ವಿಜ್ಞಾನಿಗಳಿಗೆ ಮೋದಿ ಪ್ರಶಂಸೆ

ಮೇ ೧೧ ೧೯೯೮ ರಂದು ನಡೆದ ಪೋಖ್ರಾನ್ ಪರಮಾಣು ಪರೀಕ್ಷೆಗೆ ಅಂದಿನ ವಿಜ್ಞಾನಿಗಳು ಮತ್ತು ರಾಜಕೀಯ ನಾಯಕರನ್ನು ಪ್ರಧಾನಿ ಮೋದಿ ಪ್ರಶಂಸಿದ್ದಾರೆ.

ನವದೆಹಲಿ: ಮೇ 11, 1998ರಂದು ನಡೆದ ಪೋಖ್ರಾನ್ ಪರಮಾಣು ಪರೀಕ್ಷೆಗೆ ಅಂದಿನ ವಿಜ್ಞಾನಿಗಳು ಮತ್ತು ರಾಜಕೀಯ ನಾಯಕರನ್ನು ಪ್ರಧಾನಿ ಮೋದಿ ಪ್ರಶಂಸಿದ್ದಾರೆ. ಈ ದಿನವನ್ನು ತಂತ್ರಜ್ಞಾನ ದಿನ ಎಂದು ಕೂಡ ಭಾರತದಲ್ಲಿ ಆಚರಿಸಲಾಗುತ್ತದೆ.

ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿರುವ ಮೋದಿ "1998 ರ ಈ ದಿನ ಪೋಖ್ರಾನ್ ಪರಮಾಣು ಪರೀಕ್ಷೆಯ ಯಶಸ್ಸಿಗೆ ನಮ್ಮ ವಿಜ್ಞಾನಿಗಳು ಮತ್ತು ರಾಜಕೀಯ ನಾಯಕತ್ವದ ಪರಿಶ್ರಮಕ್ಕೆ ನನ್ನ ಸಲಾಂ" ಎಂದಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಇದು ವಿಶೇಷ ದಿನ ಎಂದು ಕೂಡ ತಿಳಿಸಿರುವ ಮೋದಿ, "1998 ರ ಈ ದಿನದಂದು ಭಾರತ ರಾಜಸ್ಥಾನ ಪೋಖ್ರಾನ್ ನಲ್ಲಿ ಪರಮಾಣು ಪರೀಕ್ಷೆ ಮಾಡಿತ್ತು. ಅಟಲ್ ಅವರು ಪರೀಕ್ಷೆಯ ಯಶಸ್ಸನ್ನು ಘೋಷಿಸಿದಾಗ ದೇಶ ಪೂರ್ತಿ ಸಂಭ್ರಮಿಸಿತ್ತು. ಮೇ 13 ರಂದು ಮತ್ತೆ ಪರೀಕ್ಷಿಸಿತು" ಎಂದು ಕೂಡ ಅವರು ತಿಳಿಸಿದ್ದಾರೆ.

ನಮ್ಮ ವಿಜ್ಞಾನಿಗಳ ಅಭೂತಪೂರ್ವ ಕೆಲಸವೇ ಇದಕ್ಕೆ ಕಾರಣ. ಇದು ತಂತ್ರಜ್ಞಾನದ ಗೆಲುವು ಎಂದು ಕೂಡ ಅವರು ತಿಳಿಸಿದ್ದಾರೆ.

"ಅಟಲ್ ಅವರ ಸರ್ಕಾರ ಅದ್ಭುತ ಶೌರ್ಯವನ್ನು ಪ್ರದರ್ಶಿಸಿತ್ತು ಹಾಗೂ ಗಟ್ಟಿ ನಾಯಕತ್ವದ ಪ್ರಾಮುಖ್ಯತೆಯನ್ನು ತೋರಿಸಿಕೊಟ್ಟಿತ್ತು" ಎಂದು ಮೋದಿ ತಿಳಿಸಿದ್ದಾರೆ. ಆಗ ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ