ತುಷಾರ್ ಗಾಂಧಿ 
ಪ್ರಧಾನ ಸುದ್ದಿ

ಭಗತ್ ಸಿಂಗ್ ಗೆ ಅವಮಾನ; ಗಾಂಧಿ ಮರಿಮೊಮ್ಮಗನ ಮೇಲೆ ಕೇಸು ದಾಖಲು

ಸ್ವಾತಂತ್ರ್ಯಹೋರಾಟಗಾರ ಶಹೀದ್ ಎ ಅಜಮ್ ಭಗತ್ ಸಿಂಗ್ ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಮಹಾತ್ಮ ಗಾಂಧಿ ಅವರ

ಚಂಡೀಘರ್: ಸ್ವಾತಂತ್ರ್ಯಹೋರಾಟಗಾರ ಶಹೀದ್ ಎ ಅಜಮ್ ಭಗತ್ ಸಿಂಗ್ ಅವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅವರ ಮೇಲೆ ಪಂಜಾಬ್ ಪೊಲೀಸರು ಕೇಸು ದಾಖಲಿಸಿದ್ದಾರೆ.

ಜನ ಜಾಗೃತಿ ಮಂಚದ ಅಧ್ಯಕ್ಷ ಕೃಷ್ಣ ಲಾಲ್ ನೀಡಿರುವ ದೂರಿನ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ ೨೯೫ ಎ ಅಡಿ ದೂರು ದಾಖಲಿಸಿದ್ದಾರೆ. ತುಷಾರ್ ಅವರು ಜೈಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡುವಾಗ ಭಗತ್ ಸಿಂಗ್ ಅವರು ಬ್ರಿಟಿಶ್ ಆಡಳಿತಗಾರರಿಗೆ ಅಪರಾಧಿಯಾಗಿದ್ದರಿಂದ ಮಹಾತ್ಮ ಗಾಂಧಿ ಭಗತ್ ಸಿಂಗ್ ಅವರ ಮರಣ ದಂಡನೆ ಶಿಕ್ಷೆಯ ಮಧ್ಯೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ ಎಂದು ದೂರಲಾಗಿದೆ.

ಭಗತ್ ಸಿಂಗ್ ಅವರ ಬಗ್ಗೆ ೨೦ ವರ್ಷಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜನ ಜಾಗೃತಿ ಮಂಚ ಮತ್ತು ಇತರ ಸಹ ಸಂಸ್ಥೆಗಳು ಶನಿವಾರ ಜಲಂಧರ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ತುಷಾರ್ ಅವರ ಹೇಳಿಕೆಗಳು ನಮ್ಮ ಭಾವನೆಗಳನ್ನು ಘಾಸಿಗೊಳಿಸಿವೆ ಎಂದು ಕೂಡ ಅವರು ದೂರಿದ್ದಾರೆ.

ಭಗತ್ ಸಿಂಗ್ ಪರ ಸಂಘಟನೆಗಳು ಭಾನುವಾರ ಜಲಂಧರ್ ನ ಭಗತ್ ಸಿಂಗ್ ಚೌಕದಲ್ಲಿ ತುಷಾರ್ ಅವರ ಪ್ರತಿಕೃತಿಯನ್ನು ಸುಟ್ಟ ಘಟನೆ ಕೂಡ ನಡೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT