ಮುಜಫರನಗರ: ಸಾರ್ವಜನಿಕ ಕೈ ಪಂಪಿನಿಂದ ನೀರು ತರಲು ಹೋದ ದಲಿತ ಮಹಿಳೆಗೆ ಶಮಾಲಿ ಜಿಲ್ಲೆಯಲ್ಲಿ ಸರ್ವಣೀಯ ಸಮುದಾಯನ ಇಬ್ಬರು ಯುವಕರು ಥಳಿಸಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಕಾಂಢ್ಲಾ ಪ್ರದೇಶದ ಗಂಗೇತು ಗ್ರಾಮದಲ್ಲಿ ರಾಮೋ ದೇವಿ (೫೫) ಎಂಬ ಮಹಿಳೆ ನೀರು ತರಲು ಕೈ ಪಂಪ್ ಬಳಿ ಹೋದಾಗ ಇಬ್ಬರು ಸಹೋದರು ಮಹಿಳೆಯನ್ನು ಸಿಕ್ಕಾಪಟ್ಟೆ ಹೊಡೆದು, ಜಾತಿ ನಿಂದನೆ ಮಾಡಿದ್ದಾರೆ. ಈ ಸಹೋದರರನ್ನು ತೆಹ್ಸಿನ್ ಖುರೇಶಿ ಮತ್ತು ಮೊಹ್ಸಿನ್ ಎಂದು ಗುರುತಿಸಲಾಗಿದೆ.
ನಂತರ ಪೊಲೀಸರಿಗೆ ರಾಮೋ ದೇವಿ ದೂರು ನೀಡಿರುವ ಹಿನ್ನಲೆಯಲ್ಲಿ ಈ ಯುವಕರ ವಿರುದ್ಧ ಎಸ್ ಸಿ ಎಸ್ ಟಿ ಕಾಯ್ದೆ, ಐ ಪಿ ಸಿ ಸೆಕ್ಷನ್ ೩೨೩ ಮತ್ತು ೫೦೬ ಅಡಿ ಕೇಸು ದಾಖಲಿಸಲಾಗಿದೆ.
ತೆಹ್ಸಿನ್ ನನ್ನು ಬಂಧಿಸಲಾಗಿದ್ದು, ಮೊಹ್ಸಿನ್ ತಲೆತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.