ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಬುಲ್ ಅತಿಥಿ ಗೃಹದ ಮೇಲೆ ಭಯೋತ್ಪಾದಕ ದಾಳಿ; ಇಬ್ಬರು ಭಾರತೀಯರ ಸಾವು

ಅಫ್ಘಾನಿಸ್ಥಾನದ ರಾಜಧಾನಿಯ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು

ಹೋಟೆಲ್ ಎದುರು ಅಫ್ಘಾನಿಸ್ಥಾನ ಪೊಲೀಸ್
Guruprasad Narayana
Updated On : 14 May 2015, 10:52 am

ಕಾಬುಲ್: ಅಫ್ಘಾನಿಸ್ಥಾನದ ರಾಜಧಾನಿಯ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಭಾರತೀಯರೂ ಮತ್ತು ಒಬ್ಬ ಅಮೆರಿಕನ್ನನೂ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಸುಮಾರು ೮:೩೦ಕ್ಕೆ ಬಂಧೂಕುದಾರಿಯೊಬ್ಬ ಪಾರ್ಕ್ ಪ್ಯಾಲೇಸ್ ಹೋಟೆಲ್ಲಿನ ಮೇಲೆ ಗುಂಡಿನ ದಾಳಿ ನಡೆಸಿದ ಎಂದು ಕಾಬುಲ್ ಪೊಲೀಸ್ ಮುಖ್ಯ ಕಾರ್ಯದರ್ಶು ಅಬ್ದುಲ್ ರೆಹಮಾನ್ ರಹೀಮಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ಒಬ್ಬ ಅಮೆರಿಕಾ ನಾಗರಿಕ ಮೃತಪಟ್ಟಿರುವುದನ್ನು ಅಮೆರಿಕಾ ರಾಯಭಾರ ಕಚೇರಿ ಧೃಢಪಡಿಸಿದೆ. ಈ ವೇಳೆಯಲ್ಲಿ ವಿದೇಶಿಯರು ಹಾಗು ಅಮೆರಿಕಾ ನಾಗರಿಕರು ಸೇರಿದಂತೆ ಸುಮಾರು ೧೨ ಜನ ಹೋಟೆಲ್ ನ ಅತಿಥಿ ಗೃಹದಲ್ಲಿ ಇದ್ದರು ಎಂದು ಅಮೆರಿಕಾದ ಲಾಸ್ ಏಂಜಲಿಸ್ ನ ಪ್ರಜೆ ಅಮಿನ್ ಹಬೀಬ್ ತಿಳಿಸಿದ್ದಾರೆ.

ಇದೇ ವೇಳೆಗೆ ಎರಡು ಸ್ಫೋಟಗಳು ಸಂಭವಿಸಿದ್ದು ಕೇಳಿ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾಗಿ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವು ಅತಿಥಿಗೃಹದಲ್ಲಿದ್ದ ಸುಮಾರು ೨೦ ಜನರನ್ನು ರಕ್ಷಿಸಿದರು ಎಂದು ತಿಳಿದು ಬಂದಿದೆ. ಪೊಲೀಸ್ ಮತ್ತು ಭಯೋತ್ಪಾದಕನ ನಡುವಿನ ಕಾಳಗ ಗುರುವಾರ ಬೆಳೆಗ್ಗೆ ಅಂತ್ಯವಾಗಿದೆ ಎಂದು ಕೂಡ ತಿಳಿದುಬಂದಿದೆ.

ಈ ದಾಳಿಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊಣೆ ಹೊತ್ತಿಲ್ಲ. ಆದರೆ ಈ ಹಿಂದೆ ತಾಲಿಬಾನ್ ಸಂಘಟನೆ ಇತರ ಅತಿಥಿಗೃಹಗಳ ಮೇಲೆ ದಾಳಿ ನಡೆಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement