ಪ್ರಧಾನ ಸುದ್ದಿ

ಶಾಂಘೈನಲ್ಲಿ ಚೀನಾದ ಪ್ರಮುಖ ಸಿಇಒ ಗಳನ್ನು ಭೇಟಿ ಮಾಡಿದ ಮೋದಿ

Guruprasad Narayana

ಶಾಂಘೈ: ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ದೈತ್ಯ ಅಂತರ್ಜಾಲ ಮಾರಾಟಗಾರ ಸಂಸ್ಥೆ ಆಲಿಬಾಬದ ಮುಖ್ಯ ನಿರ್ವಹಣಾ ಅಧಿಕಾರಿ ಜ್ಯಾಕ್ ಮಾ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಸಿಇಒ ಗಳನ್ನು ಭೇಟಿ ಮಾಡಿದ್ದಾರೆ.

"ನಾನು 'ಮೇಕ್ ಇನ್ ಇಂಡಿಯ' ಎಂದು ನಿಮ್ಮೆಲ್ಲರಿಗೂ ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಮೋದಿ ಸಿಇಒ ಗಳಿಗೆ ಹೇಳಿದರು ಎಂದು ವಿದೇಶಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

"ನಾನು ಭಾರತದ ಬಗ್ಗೆ ಉತ್ಸುಕರಾಗಿದ್ದೇವೆ. ಹಾಗೆಯೆ 'ಮೇಕ್ ಇನ್ ಇಂಡಿಯಾ' ಮತ್ತು ಡಿಜಿಟಲ್ ಇಂಡಿಯ ಬಗ್ಗೆಯೂ" ಎಂದು ಆಲಿಬಾಬ ಸಿಇಒ ಜ್ಯಾಕ್ ಮಾ ಮೋದಿ ಅವರಿಗೆ ತಿಳಿಸಿದರು ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.

"ನಮಗೆ ಭಾರತದ ಬಗ್ಗೆ ಭಾರಿ ಭರವಸೆ ಇದೆ. ಭಾರತ ಅತಿ ದೊಡ್ಡ ಮಾರುಕಟ್ಟೆ ಮತ್ತು ಕೆಲಸದಾರರನ್ನು ಒದಗಿಸಿಕೊಡುತ್ತದೆ" ಎಂದು ಎಸ್ ಎ ಏನ್ ವೈ ಅಧ್ಯಕ್ಷ ಲಿಯಾಂಗ್ ವೆಂಗೆನ್ ತಿಳಿಸಿದರು ಎಂದು ಮತ್ತೊಂದು ಟ್ವೀಟ್ ಹೇಳಿದೆ.

ಪ್ರಧಾನಿ ಪ್ರವಾಸದಲ್ಲಿ ಶಾಂಘೈ ಭೇಟಿ ಕೊನೆಯದಾಗಿದ್ದು ಇನ್ನು ಮಂಗೋಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

SCROLL FOR NEXT