ಬೆಂಗಳೂರು: 2014-15ಮೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಬಾಲಿಕಿಯರೇ ಮೇಲುಗೈ ಸಾಧಿಸಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷ್ಮಾ ಗೋಡಬೋಲೆ ಅವರು, ಈ ವರ್ಷ ಶೇ.60.54ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶದಲ್ಲಿ ದಕ್ಷಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ ಹಾಗೂ ಉತ್ತರ ಕನ್ನಡ ತೃತೀಯ ಸ್ಥಾನ ಪಡೆದರೆ, ಗದಗ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.
ರಾಜ್ಯದ 55 ಕಾಲೇಜುಗಳಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಬಂದಿದ್ದು, 47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪ್ರಸಕ್ತ ಸಾಲಿನಲ್ಲಿ 105 ವಿದ್ಯಾರ್ಥಿಗಳು ಡಿಬಾರ್ ಆಗಿದ್ದರು ಎಂದು ಗೋಡಬೋಲೆ ಅವರು ಹೇಳಿದರು.
12 ಗಂಟೆ ಬಳಿಕ ಇಲಾಖೆ ಅಧಿಕೃತ ವೆಬ್‍ಸೈಟ್(www.pue.kar.nic.in )ನಲ್ಲಿ ಫಲಿತಾಂಶ ದೊರೆಯಲಿದೆ.. ಮಾರ್ಚ್ ಮೂರನೇ ವಾರದಲ್ಲಿ ನಡೆದ ದ್ವಿತೀಯ ಪಿಯು ಅಂತಿಮ ಪರೀಕ್ಷೆಗೆ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
ಕಳೆದ ವರ್ಷ ರಾಜ್ಯವಾರು ಫಲಿತಾಂಶದಲ್ಲಿ ಮೊದಲ ಬಾರಿಗೆ ಪಿಯು ವಿದ್ಯಾರ್ಥಿಗಳು ಶೇ.60ರ ಗಡಿ ದಾಟಿದ್ದರು. ನೂತನ ಪಠ್ಯಕ್ರಮ ಅನುಷ್ಠಾನಕ್ಕೆ ಬಂದ ಬಳಿಕದ ಎರಡನೇ ಫಲಿತಾಂಶ ಇದಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಫಲಿತಾಂಶವು ಆಯಾಕಾಲೇಜುಗಳಲ್ಲಿ ಲಭ್ಯವಿರಲಿದೆ.
ಫಲಿತಾಂಶಕ್ಕೆ ಇಲ್ಲಿಗೆ ಭೇಟಿ ನೀಡಿ