ದಕ್ಷಿಣ ಕೊರಿಯಾದಲ್ಲಿ ನರೇಂದ್ರ ಮೋದಿ 
ಪ್ರಧಾನ ಸುದ್ದಿ

ಏಶಿಯಾ ಒಕ್ಕೂಟ ವಿಶ್ವಕ್ಕೆ ಹೊಸ ರೂಪ ನೀಡುತ್ತದೆ: ಮೋದಿ

ಏಶಿಯಾ ಖಂಡದ ರಾಷ್ಟ್ರಗಳು ಒಗ್ಗೂಡಿ, ವಿಶ್ವ ಸಂಸ್ಥೆಯೂ ಒಳಗೊಂಡಂತೆ ವಿಶ್ವದ ವಿವಿಧ ಸಂಸ್ಥೆಗಳ ಸುಧಾರಣೆಗೆ ಹಾಗೂ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು

ಸಿಯೋಲ್: ಏಶಿಯಾ ಖಂಡದ ರಾಷ್ಟ್ರಗಳು ಒಗ್ಗೂಡಿ, ವಿಶ್ವ ಸಂಸ್ಥೆಯೂ ಒಳಗೊಂಡಂತೆ ವಿಶ್ವದ ವಿವಿಧ ಸಂಸ್ಥೆಗಳ ಸುಧಾರಣೆಗೆ ಹಾಗೂ ಜಾಗತಿಕ ಹೊಸರೂಪಕ್ಕೆ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.

"ಏಶಿಯಾ ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬೇಕಾದರೆ, ಕೇವಲ ಪ್ರಾದೇಶಿಕ ತುಣುಕುಗಳಾಗಿ ಕೆಲಸ ಮಾಡಿದರಷ್ಟೇ ಸಾಧ್ಯವಿಲ್ಲ" ಎಂದು ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಆರನೇ ಏಶಿಯಾ ನಾಯಕತ್ವ ಸಮಾವೇಶದಲ್ಲಿ ಹೇಳಿದ್ದಾರೆ.

ಈ ಖಂಡದಲ್ಲಿರುವ ವಿರೋಧಗಳು ನಮ್ಮನ್ನು ಹಿಂದಕ್ಕೆ ನೂಕದೆ ಒಂದು ಸಾಮಾನ್ಯ ಗುರಿಗಾಗಿ ಎಲ್ಲ ರಾಷ್ಟ್ರಗಳು ಒಗ್ಗೂಡಿ ಶ್ರಮಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

ಭಾರತದ ಅಭಿವೃದ್ಧಿ ಏಶಿಯಾದ ಗೆಲುವಿನ ಕಥೆಯಾಗಲಿದ್ದು ಏಶಿಯಾ ಕನಸನ್ನು ಸಾಕಾರಗೊಳಿಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ ಮೋದಿ.

"ನನ್ನ ಏಶಿಯಾ ಕನಸೇನೆಂದರೆ ಸಂಪೂರ್ಣ ಏಶಿಯಾ ಒಟ್ಟಿಗೆ ಮೇಲೇಳಬೇಕು... ನನ್ನ ಭಾರತದ ಮುಂಂದಿನ ಕನಸು ನಮ್ಮ ನೆರೆ ಹೊರೆಯವರ ಕನಸು ಕೂಡ ಆಗಿರುತ್ತದೆ. ನಮ್ಮ ಅಭಿವೃದ್ಧಿ ನೆರೆಹೊರೆಯ ರಾಷ್ಟ್ರಗಳನ್ನು ಒಳಗೊಂಡಿರುತ್ತದೆ" ಎಂದು ಮೂರು ರಾಷ್ರಗಳ ಪ್ರವಾಸದೆ ಕೊನೆಯ ಹಂತದ ಪ್ರವಾಸದ ಸಮಯದಲ್ಲಿ ಪ್ರಧಾನಿ ಹೇಳಿದ್ದಾರೆ.

"ಏಶಿಯಾ ಖಂಡದ ಸಂಪರ್ಕಕ್ಕೆ ನಾವು ಶ್ರಮಿಸುತ್ತೇವೆ" ಎಂದು ಕೂಡ ಮೋದಿ ತಿಳಿಸಿದ್ದಾರೆ.

ಹೆಚ್ಚು ಅಭಿವೃದ್ಧಿಯಾಗಿರುವ ಏಶಿಯಾ ದೇಶಗಳು ಇತರ ರಾಷ್ಟ್ರಗಳೊಂದಿಗೆ ತಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳಬೇಕು ಎಂದು ಮೋದಿ ಕರೆ ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ