ಅರುಣ್ ಜೇಟ್ಲಿ 
ಪ್ರಧಾನ ಸುದ್ದಿ

ಜನಕ್ಕೆ ಬೇಕಿರುವುದು ಒಳ್ಳೆಯ ಆಡಳಿತ, ವಿವಾದಗಳಲ್ಲ: ಎಎಪಿಗೆ ಜೇಟ್ಲಿ ಕಿವಿಮಾತು

ದೆಹಲಿ ಮುಖ್ಯ ಕಾರ್ಯದರ್ಶಿ ನೇಮಕಾತಿ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಡುವೆ

ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿ ನೇಮಕಾತಿ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ನಡುವೆ ಕಾದಾಟ ತಾರಕಕೇರುತ್ತಿದ್ದು, ಎಎಪಿ ಪಕ್ಷಕ್ಕೆ ಅಧಿಕಾರ ನೀಡಿದ ಜನರ ಪರೀಕ್ಷೆ ದುಬಾರಿಯಾಗುತ್ತಿದೆ ಎಂದಿದ್ದಾರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.

"ದೆಹಲಿಯ ಜನತೆ ಈ ಹೊಸ ಪಕ್ಷಕ್ಕೆ ಅಧಿಕಾರ ನೀಡಿ ಪರೀಕ್ಷೆ ಮಾಡಿದರು, ಆದರೆ ಈ ಪರೀಕ್ಷೆ ಅತಿ ದುಬಾರಿಯಾಗುತ್ತಿದೆ ಏಕೆಂದರೆ ದೆಹಲಿ ಸರ್ಕಾರಕ್ಕೆ ಆಡಳಿತದ ಮೇಲೆ ಗಮನ ಇಲ್ಲ" ಎಂದು ಜೇಟ್ಲಿ ಟೀಕಿಸಿದ್ದಾರೆ.

ದೆಹಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಎಎಪಿ ಸರ್ಕಾರದ ಸುತ್ತ ಇರುವ ವಿವಿಧ ವಿವಾದಗಳನ್ನು ಸಾಮಾನ್ಯವಾಗಿ ಹಾಗು ನಿರ್ಧಿಷ್ಟವಾಗಿ ಜಂಗ್ ಮತ್ತು ಕೇಜ್ರಿವಾಲ್ ವಿರುದ್ಧದ ಕುಸ್ತಿಯ ಬಗ್ಗೆ ಮಾತನಾಡಿದ ಜೇಟ್ಲಿ ದೆಹಲಿ ಜನತೆಗೆ ಬೇಕಾಗಿರುವುದು ಒಳ್ಳೆಯ ಆಡಳಿತ, ಸರ್ಕಾರ ಇದನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.

"ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಬಹಳ ನೋವು ತರುವಂತಹವು. ಅತಿ ದೊಡ್ಡ ಬಹುಮತದಿಂದ ಎಎಪಿ ಸರ್ಕಾರ ಅಧಿಕಾರಕ್ಕೆ ಬಂತು. ಅವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಜನಕ್ಕೆ ಬೇಕಿರುವುದು ಒಳ್ಳೆಯ ಆಡಳಿತ, ವಿವಾದಗಳಲ್ಲ. ಆದುದರಿಂದ ದೆಹಲಿ ಸರ್ಕಾರ ಜನರ ಆಶಯಗಳನ್ನು ಪೂರೈಸುವತ್ತ ಗಮನ ಹರಿಸಬೇಕು" ಎಂದಿದ್ದಾರೆ.

ಒಳ್ಳೆಯ ಪ್ರವಾಸೋದ್ಯಮ ಮತ್ತು ವಾಣಿಜ್ಯ ಅವಕಾಶಗಳು ಇರುವುದರಿಂದ ದೆಹಲಿಯನ್ನು ಜಾಗತಿಕ ನಗರವಾಗಿ ಮಾರ್ಪಡಿಸಬಹುದಿತ್ತು ಎಂದು ಕೂಡ ಜೇಟ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!