ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಹಾಯ ಕೇಳಿ ಜನತಾ ದರ್ಶನಕ್ಕೆ ಆಗಮಿಸಿದ್ದ ರಂಗಭೂಮಿ ಕಲಾವಿದರೊಬ್ಬರಿಗೆ 10 ಸಾವಿರ ರುಪಾಯಿ ನಗದು ನೀಡಿ ಅಚ್ಚರಿ ಮೂಡಿಸಿದರು.
ಇಂದು ಮೈಸೂರಿನ ಶಾರದಾ ದೇವಿ ನಗರದ ತಮ್ಮ ನಿವಾಸದಲ್ಲಿ ಸಿಎಂ ಜನತಾ ದರ್ಶನ ನಡೆಸಿದರು. ಈ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ, ಕಳೆದ 30 ವರ್ಷಗಳಿಂದ ತಮಗೆ ಪರಿಚಿತನಾಗಿದ್ದ ಕಲಾವಿದ ಮರಿಯಪ್ಪ ಅವರು ಚಿಕಿತ್ಸೆಗೆ ಸಹಾಯ ಕೋರಿ ಸಿಎಂ ಬಳಿ ಬಂದಿದ್ದರು.
ಸಾಮಾನ್ಯವಾಗಿ ಜನರ ಮನವಿ ಸ್ವೀಕರಿಸಿ, ಅದನ್ನು ತಮ್ಮ ಸಹಾಯಕರ ಕೈಗೆ ನೀಡುತ್ತಿದ್ದ ಸಿಎ, ಇಂದು ಸ್ಥಳದಲ್ಲೇ ತಮ್ಮ ಪರ್ಸ್‌ನಿಂದ 10 ಸಾವಿರ ರುಪಾಯಿ ತೆಗೆದು ಮರಿಯಪ್ಪ ಅವರಿಗೆ ನೀಡಿ ಗಮನ ಸೆಳೆದರು.