ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಚೈನಾದಲ್ಲಿ ೧೮೧ ಭಯೋತ್ಪಾದಕ ಗುಂಪುಗಳ ದಮನ

ಚೈನಾದ ಕ್ಸಿಂಜಿಯಾಂಗ್ ಸ್ವಾಯತ್ತತ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭಿಸಿದ ಭಯೋತ್ಪಾದನಾ ವಿರೋಧಿ ಅಭಿಯಾನದಲ್ಲಿ ಸುಮಾರು ೧೮೧ ಭಯೋತ್ಪಾದಕ

ಸಾಂದರ್ಭಿಕ ಚಿತ್ರ
Guruprasad Narayana
Updated On : 25 May 2015, 12:25 pm

ಬೀಜಿಂಗ್: ಚೈನಾದ ಕ್ಸಿಂಜಿಯಾಂಗ್ ಸ್ವಾಯತ್ತತ ಪ್ರದೇಶದಲ್ಲಿ ಒಂದು ವರ್ಷದ ಹಿಂದೆ ಪ್ರಾರಂಭಿಸಿದ ಭಯೋತ್ಪಾದನಾ ವಿರೋಧಿ ಅಭಿಯಾನದಲ್ಲಿ ಸುಮಾರು ೧೮೧ ಭಯೋತ್ಪಾದಕ ಗುಂಪುಗಳನ್ನು ಪೊಲೀಸರು ನಾಶ ಮಾಡಿದ್ದಾರೆ.

ಚೈನಾದ ಕಮ್ಮ್ಯುನಿಸ್ಟ್ ಪಕ್ಷದ ಪ್ರಾದೇಶಿಕ ಸಮಿತಿಯ ದಾಖಲೆಗಳು ಸೂಚಿಸುವಂತೆ ಯೋಜನಾ ಹಂತದಲ್ಲೇ ಸುಮಾರು ೯೨.೬% ಭಯೋತ್ಪಾದಕ ಸಂಘಟನೆಗಳನ್ನು ತೊಡೆದು ಹಾಕಲಾಗಿದೆ ಹಾಗು ಸುಮಾರು ೧೧೨ ಜನ ಶಂಕಿತರು ಪೊಲೀಸರಿಗೆ ಶರಣಾಗಿದ್ದಾರೆ.

೨೦೧೪ರ ಮೇನಲ್ಲಿ ಈ ಪ್ರದೇಶದ ರಾಜಧಾನಿ ಅರಮ್ಕಿಯ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ೩೯ ಜನ ಮೃತಪಟ್ಟ ಹಿನ್ನಲೆಯಲ್ಲಿ ಈ ಅಭಿಯಾನವನ್ನು ಚೈನಾ ಪ್ರಾರಂಭಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement