ಪ್ರಧಾನ ಸುದ್ದಿ

ಮೋದಿ ಸರ್ಕಾರದ ವಿರುದ್ಧ ಟೀಕೆ: ವಿದ್ಯಾರ್ಥಿಗಳಿಗೆ ಐಐಟಿ ಮದ್ರಾಸ್ ನಿಷೇಧ

Guruprasad Narayana

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ 'ದ್ವೇಷ' ಬಿತ್ತುತ್ತಿದ್ದಾರೆ ಎಂದು ದೂರಿ ಐಐಟಿ ಮದ್ರಾಸ್ ವಿದ್ಯಾರ್ಥಿಗಳ ಅಂತರ್ಜಾಲ ಚರ್ಚಾ ವೇದಿಕೆಗೆ ನಿಷೇಧ ಹೇರಿರುವ ಘಟನೆ ನಡೆದಿದೆ.

ಗೋಹತ್ಯೆ ಕಾಯ್ದೆ ಮತ್ತು ಹಿಂದಿ ಹೇರಿಕೆ ವಿರುದ್ಧ ಈ ವಿದ್ಯಾರ್ಥಿಗಳು ಮೋದಿ ಸರ್ಕಾರದ ನೀತಿಗಳನ್ನು ವಿರೋಧಿಸಿದ್ದರು ಎಂದು ಆರೋಪಿಸಲಾಗಿದೆ.

ಸಾಮಾನ್ಯ ಮನುಷ್ಯನ ಮೇಲೆ ಪರಿಣಾಮ ಬೀರುವ ಸಾಂಸ್ಕೃತಿಕ ಮತ್ತು ಸಾಮಾಜಿಕ-ಆರ್ಥಿಕ-ರಾಜಕೀಯ ವಿಷಯಗಳನ್ನು ಚರ್ಚಿಸಲು ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್ (ಎಪಿಎಸ್ ಸಿ) ಸ್ಥಾಪಿಸಲಾಗಿತ್ತು ಎಂದು ಪಿ ಎಚ್ ಡಿ ವಿದ್ವಾಂಸರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಐಐಟಿ ಮದ್ರಾಸ್ ನಲ್ಲಿ ಪ್ರಖ್ಯಾತವಾಗಿರುವ ಮಾನವೀಯ ಶಾಸ್ತ್ರಗಳ ವಿಭಾಗ ಕೂಡ ಇದೆ.

ಮೇ ೧೫ ರಂದು ಐಐಟಿ ನಿರ್ದೇಶಕರಿಗೆ ಕೆಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಿಸ್ಕಾ ಮ್ಯಾಥ್ಯು ಬರೆದಿರುವ ಪತ್ರದಲ್ಲಿ 'ಮೇಲ್ಕಂಡ ವಿಷಯದ ಬಗ್ಗೆ ನಮಗೆ ಬಂದಿರುವ ಅನಾಮಧೇಯ ಪತ್ರದಲ್ಲಿ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ದೂರಿದ್ದಾರೆ. ಅಲ್ಲದೆ ಎ ಪಿ ಎಸ್ ಸಿ ಹಂಚಿರುವ ಬಿಲ್ಲೆಗಳು ಕೂಡ ಲಭ್ಯವಾಗಿವೆ. ಇದರ ಬಗ್ಗೆ ಸಂಸ್ಥೆಯ ಪ್ರತಿಕ್ರಿಯೆಯನ್ನು ಸಚಿವಾಲಯಕ್ಕೆ ಕೂಡಲೆ ಕಳುಹಿಸಿಕೊಡುವುದು" ಎನ್ನಲಾಗಿದೆ.

ಇದರಿಂದ ಕುಪಿತಗೊಂದಿರುವ ಎ ಪಿ ಎಸ್ ಸಿ ಸದಸ್ಯರು "ನಾವು ಭಾರತದ ಸಂವಿಧಾನದೊಳಗೆ ಕಾರ್ಯ ನಿರ್ವಹಿಸಿದ್ದೇವೆ. ಇಲ್ಲಿಯವರೆಗೆ ನಮ್ಮ ಚಟುವಟಿಕೆಗಳು ಆರೋಗ್ಯಕರವಾಗಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಾಮಾಜಿಕ-ಆರ್ಥಿಕ ವಿಷಯಗಳನ್ನು ಚರ್ಚಿಸಿದ್ದೇವೆ" ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ. 

SCROLL FOR NEXT