ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 
ಪ್ರಧಾನ ಸುದ್ದಿ

೧೦೦ ರಾಹುಲ್ ಗಾಂಧಿಗಳು ಸೇರಿದರೂ ಒಬ್ಬ ಮೋದಿಗೆ ಸಮನಲ್ಲ: ಶಿವಸೇನ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಸೂಟು ಬೂಟು ಸರ್ಕಾರ ಎಂದು ಜರಿದಿರುವುದನ್ನು ಗೇಲಿ ಮಾಡಿರುವ ಶಿವಸೇನೆ ಸ್ಯೂಟ್ ಕೇಸ್

ಮುಂಬೈ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಸೂಟು ಬೂಟು ಸರ್ಕಾರ ಎಂದು ಜರಿದಿರುವುದನ್ನು ಗೇಲಿ ಮಾಡಿರುವ ಶಿವಸೇನೆ ಸ್ಯೂಟ್ ಕೇಸ್ ಸರ್ಕಾರಕ್ಕಿಂತ ಸೂಟು ಬೂಟು ಸರ್ಕಾರ ಲೇಸು ಅಂದಿರುವುದಲ್ಲದೆ, ೧೦೦ ರಾಹು ಗಾಂಧಿಗಳನ್ನು ಸೇರಿಸಿದರೂ ಪ್ರಧಾನಿ ನರೇಂದ್ರ ಮೋದಿಯವರ 'ದೊಡ್ಡ ಅಲೆಗೆ' ಸಮನಾಗುವುದಿಲ್ಲ ಎಂದಿದೆ.

ತಮ್ಮ ಸುಧೀರ್ಘ ವಿರಾಮದ ನಂತರ ರಾಹುಲ್ ಗಾಂಧಿ ಓಡಾಡಲು ಮಾತನಾಡಲು ಪ್ರಾರಂಭಿಸಿದ್ದಾರೆ ಆದರೆ ಅವರು ಮೋದಿಯವರಿಗೆ ಸಮರಲ್ಲ ಎಂದು ಸೇನೆ ಹೇಳಿದೆ. "56 ದಿನಗಳ ರಾಜಕೀಯ ವಿರಾಮದ ನಂತರ ರಾಹುಲ್ ಗಾಂಧಿಯವರು ಓಡಾಡಲು ಮಾತನಾಡಲು ಪ್ರಾರಂಭಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮವಿಶ್ವಾಸವನ್ನು ಮರುಕಳಿಸಿದೆ. ಆದರೆ ಪ್ರಶ್ನೆಯಿರುವುದು ಇನ್ನು ಎಷ್ಟು ದಿನ ಈ ನವೀಕೃತ ಶಕ್ತಿ ಮೋದಿಯವರ ಬೃಹತ್ ಅಲೆಗಳ ಮುಂದೆ ಉಳಿಯುತ್ತದೆ ಎಂಬುದು" ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಗೇಲಿ ಮಾಡಿದೆ.

'ಕೋಲ್ ಗೇಟ್' ಮತ್ತು '೨ಜಿ' ಹಗರಣಗಳನ್ನು ಪ್ರಸ್ತಾಪಿಸಿರುವ ಶಿವಸೇನೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಣ ತುಂಬಿದ ಸ್ಯೂಟ್ ಕೇಸುಗಳು ಕೈಬದಲಿಸುತ್ತಿದ್ದವು ಎಂದು ಆರೋಪಿಸಿದೆ.

"ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಹೊಸ ಬೆಳಕನ್ನು ನೋಡುತ್ತಿದೆ. ಭಾರತದ ಸೂಟು ಧಾರರು (ಉದ್ಯಮಿಗಳು) ಆತ್ಮವಿಶ್ವಾಸದಿಂದ ವಿಶ್ವವನ್ನು ಸುತ್ತುತ್ತಿದ್ದಾರೆ ಇದು ದೇಶದ ಆರ್ಥಿಕ ಸ್ಥಿತಿಯನ್ನು ಪ್ರಬಲಗೊಳಿಸುತ್ತದೆ" ಎಂದು ಸಾಮ್ನಾ ಹೇಳಿದೆ. ಮುಂಬೈ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಸೂಟು ಬೂಟು ಸರ್ಕಾರ ಎಂದು ಜರಿದಿರುವುದನ್ನು ಗೇಲಿ ಮಾಡಿರುವ ಶಿವಸೇನೆ ಸ್ಯೂಟ್ ಕೇಸ್ ಸರ್ಕಾರಕ್ಕಿಂತ ಸೂಟು ಬೂಟು ಸರ್ಕಾರ ಲೇಸು ಅಂದಿರುವುದಲ್ಲದೆ, ೧೦೦ ರಾಹು ಗಾಂಧಿಗಳನ್ನು ಸೇರಿಸಿದರೂ ಪ್ರಧಾನಿ ನರೇಂದ್ರ ಮೋದಿಯವರ 'ದೊಡ್ಡ ಅಲೆಗೆ' ಸಮನಾಗುವುದಿಲ್ಲ ಎಂದಿದೆ.

ತಮ್ಮ ಸುಧೀರ್ಘ ವಿರಾಮದ ನಂತರ ರಾಹುಲ್ ಗಾಂಧಿ ಓಡಾಡಲು ಮಾತನಾಡಲು ಪ್ರಾರಂಭಿಸಿದ್ದಾರೆ ಆದರೆ ಅವರು ಮೋದಿಯವರಿಗೆ ಸಮರಲ್ಲ ಎಂದು ಸೇನೆ ಹೇಳಿದೆ. "56 ದಿನಗಳ ರಾಜಕೀಯ ವಿರಾಮದ ನಂತರ ರಾಹುಲ್ ಗಾಂಧಿಯವರು ಓಡಾಡಲು ಮಾತನಾಡಲು ಪ್ರಾರಂಭಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಆತ್ಮವಿಶ್ವಾಸವನ್ನು ಮರುಕಳಿಸಿದೆ. ಆದರೆ ಪ್ರಶ್ನೆಯಿರುವುದು ಇನ್ನು ಎಷ್ಟು ದಿನ ಈ ನವೀಕೃತ ಶಕ್ತಿ ಮೋದಿಯವರ ಬೃಹತ್ ಅಲೆಗಳ ಮುಂದೆ ಉಳಿಯುತ್ತದೆ ಎಂಬುದು" ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಗೇಲಿ ಮಾಡಿದೆ.

'ಕೋಲ್ ಗೇಟ್' ಮತ್ತು '೨ಜಿ' ಹಗರಣಗಳನ್ನು ಪ್ರಸ್ತಾಪಿಸಿರುವ ಶಿವಸೇನೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಣ ತುಂಬಿದ ಸ್ಯೂಟ್ ಕೇಸುಗಳು ಕೈಬದಲಿಸುತ್ತಿದ್ದವು ಎಂದು ಆರೋಪಿಸಿದೆ.

"ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಹೊಸ ಬೆಳಕನ್ನು ನೋಡುತ್ತಿದೆ. ಭಾರತದ ಸೂಟು ಧಾರರು (ಉದ್ಯಮಿಗಳು) ಆತ್ಮವಿಶ್ವಾಸದಿಂದ ವಿಶ್ವವನ್ನು ಸುತ್ತುತ್ತಿದ್ದಾರೆ ಇದು ದೇಶದ ಆರ್ಥಿಕ ಸ್ಥಿತಿಯನ್ನು ಪ್ರಬಲಗೊಳಿಸುತ್ತದೆ" ಎಂದು ಸಾಮ್ನಾ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!