ಖ್ಯಾತ ವಕೀಲ ರಾಮ್ ಜೇಟ್ಮಲಾನಿ 
ಪ್ರಧಾನ ಸುದ್ದಿ

ಮೋದಿ ವಂಚಕ; ಆಫ್ರಿಕಾಗೆ ಘೋಷಣೆ ಮಾಡಿದ ಹಣ 'ಬಾಪ್ ಕ ಪೈಸಾ?': ಜೇಟ್ಮಲಾನಿ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಭಾರತದ ಪ್ರಖ್ಯಾತ ವಕೀಲ ರಾಮ್ ಜೇಟ್ಮಲಾನಿ, ಭಾರತದ ಜನತೆಗೆ ಆಗಿರುವ ವಂಚನೆಗೆ ಮೋದಿ ಕೂಡ ತಪ್ಪಿತಸ್ಥ ಎಂದಿದ್ದಾರೆ.

ಲಂಡನ್: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಭಾರತದ ಪ್ರಖ್ಯಾತ ವಕೀಲ ರಾಮ್ ಜೇಟ್ಮಲಾನಿ, ಭಾರತದ ಜನತೆಗೆ ಆಗಿರುವ ವಂಚನೆಗೆ ಮೋದಿ ಕೂಡ ತಪ್ಪಿತಸ್ಥ ಎಂದಿದ್ದಾರೆ.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಜೇಟ್ಮಲಾನಿ ೨೦೧೪ರ ಲೋಕಸಭಾ ಚುನಾವಣೆಗಳಲ್ಲಿ, ಅತಿ ಕಡಿಮೆ ಸಮಯದಲ್ಲಿ ಕಪ್ಪು ಹಣ ವಾಪಸ್ ತರುವುದಾಗಿ ವಚನ ನೀಡಿದ್ದರು ಎಂಬುದನ್ನು ಮತ್ತೆ ಕೆದಕಿದ್ದಾರೆ.

ಮೇ ೨೦೧೪ರಲ್ಲಿ ಪ್ರಧಾನಿಯಾದರು ತಮ್ಮ ವಚನ ಇನ್ನು ಪೂರೈಸಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ. "ಜರ್ಮನಿ ಸರ್ಕಾರ ಸ್ವಿಟ್ಜರ್ಲ್ಯಾಂಡಿನಿಂದ ಕಪ್ಪು ಹಣ ಹೊಂದಿದ ೧೪೦೦ ಜನರ ಪಟ್ಟಿ ತರಿಸಿತ್ತು. ಅದರಲ್ಲಿ ಹಲವರು ಭಾರತೀಯರಿದ್ದರು. ಇವರ ಹೆಸರುಗಳನ್ನು ಭಾರತದ ಸರ್ಕಾರದ ಜೊತೆ ಹಂಚಿಕೊಳ್ಳುವುದಾಗಿಯೂ ತಿಳಿಸಿತ್ತು.

"ಮೋದಿ, ಜರ್ಮನ್ ಚಾನ್ಸಲರ್ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ, ಆದುದರಿಂದ ಅವರಿಗೆ ಹೆಸರುಗಳು ಸಿಕ್ಕಿವಿಯೇ ಎಂದು ಕೇಳಿದರೆ ಉತ್ತರವಿಲ್ಲ" ಎಂದು ಅವರು ಹೇಳಿದ್ದರೆ.

ಈ ವಿಷಯವಾಗಿ ಸುಪ್ರೀಮ್ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗಳಲ್ಲಿ ಮೋದಿ ಅವರನ್ನು ಬೆಂಬಲಿಸಿದ್ದ ಜೇಟ್ಮಲಾನಿ, ನಂತರ ಕಪ್ಪು ಹಣದ ವಿಷಯವಾಗಿ ಬಿಜೆಪಿ ಸರ್ಕಾರದ ವಿರೋಧ ಮಾತನಾಡಿದ್ದರು.

"ಅವರು ಅಧಿಕಾರ ಸ್ವೀಕರಿಸಿದ ಮೇಲೆ, ಇದಕ್ಕೆ ಹಣ ಇಲ್ಲ ಎಂದು ಅವರಿಗೆ ಜೈಟ್ಲಿ (ವಿತ್ತ ಸಚಿವ) ಹೇಳಿದ್ದರಂತೆ.

"ಆದರೂ ಮೋದಿ ಆಫ್ರಿಕಾಗೆ ಸಹಾಯಹಸ್ತ ಚಾಚಿ ೧೦ ಬಿಲಿಯನ್ ಯು ಎಸ್ ಡಾಲರ್ ಘೋಷಿಸಿದ್ದಾರೆ. ಬಾಪ್ ಕ ಪೈಸಾ? (ಇದು ಭಾರತ ಸರ್ಕಾರದ ದುಡ್ಡೆ ಅಥವಾ ಅವರ ಅಪ್ಪನ ದುಡ್ಡೆ?)" ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್