ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜಕಾರಣಿಗಳಿಗೆ ತಮ್ಮ ನಾಲಗೆಯ ಮೇಲೆ ಹಿಡಿತವಿರಲಿ: ಅನುಪಮ್ ಖೇರ್

ಶಾರುಖ್ ಖಾನ್‌ನ್ನು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್‌ದೆ ಹೋಲಿಸಿದ ಯೋಗಿ ಆದಿತ್ಯನಾಥ್ ವಿರುದ್ಧ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್...

ಶಾರುಖ್ ಖಾನ್‌ -ಅನುಪಮ್ ಖೇರ್
Rashmi Kasaragodu
Updated On : 4 Nov 2015, 8:29 am
ಮುಂಬೈ: ಶಾರುಖ್ ಖಾನ್‌ನ್ನು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್‌ದೆ ಹೋಲಿಸಿದ ಯೋಗಿ ಆದಿತ್ಯನಾಥ್ ವಿರುದ್ಧ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಸಿಟ್ಟಾಗಿದ್ದಾರೆ.
ಶಾರುಖ್ ಖಾನ್‌ಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿರುವ ಅನುಪಮ್ ಖೇರ್ ಬಿಜೆಪಿಯ ಕೆಲವು ಸದಸ್ಯರು ತಮ್ಮ ನಾಲಗೆ ನಿಯಂತ್ರಣದಲ್ಲಿಟ್ಟುಕೊಳ್ಳಲಿ. ಶಾರುಖ್ ಖಾನ್ ಬಗ್ಗೆ ಕೆಟ್ಟದಾಗಿ ಮಾತಾಡುವುದನ್ನು ನಿಲ್ಲಿಸಿ. ಶಾರುಖ್ ಒಬ್ಬ ದೇಶದ ಐಕಾನ್, ನಮಗೆ ಅವನ ಬಗ್ಗೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬ ಶಾರುಖ್ ಹೇಳಿಕೆಗೆ ಕೆಲವು ಬಿಜೆಪಿ ನಾಯಕರು ಟೀಕಾಪ್ರಹಾರ ಮಾಡಿದ್ದರು. ಅದೇ ವೇಳೆ ಶಿವಸೇನೆ ಶಾರುಖ್ ಖಾನ್‌ಗೆ ಬೆಂಬಲ ಸೂಚಿಸಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement