ನವದೆಹಲಿ: ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಸೈನಿಕರ ಜೊತೆಗೆ ದೀಪಾವಳಿ ಆಚರಿಸಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.
"ಇಂದು (ಬುಧವಾರ) ದೀಪಾವಳಿ ಹಬ್ಬದ ಪವಿತ್ರ ದಿನದ ಅಂಗವಾಗಿ, ಸೈನಿಕರ ಜೊತೆಗೆ ಸಮಯ ಕಳೆಯಲು ಗಡಿ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.