ಪ್ರಧಾನ ಸುದ್ದಿ

ಪ್ರಶಸ್ತಿ ವಾಪಸ್ ಮಾಡುವುದು ಸರಿಯಲ್ಲ: ಕುಮಾರಸ್ವಾಮಿ

Lingaraj Badiger

ಮೈಸೂರು: ದೇಶದಲ್ಲಿ ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿ ವಾಪಸ್ ನೀಡುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಹಿರಿಯ ಸಾಹಿತಿ ದೇವನೂರು ಮಹದೇವ ಅವರು ಪ್ರಶಸ್ತಿ ತಮ್ಮ ಪ್ರಶಸ್ತಿಗಳನ್ನು ವಾಪಸ್ ಮಾಡುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ದೇವನೂರು ಮಹದೇವ ಅವರ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವ ಇದೆ. ಈ ಬಗ್ಗೆ ಪ್ರಶಸ್ತಿ ಸ್ವೀಕರಿಸುವ ಮುನ್ನ ದೇವನೂರು ಯೋಚಿಸಬೇಕಾಗಿತ್ತು. ಆದರೆ ಈಗ ಪ್ರಶಸ್ತಿ ವಾಪಸ್ ನೀಡುತ್ತಿರುವುದು ಸರಿಯಲ್ಲ. ಇದರಿಂದ ಯಾವದೇ ಪ್ರಯೋಜನೆ ಇಲ್ಲ ಎಂದಿದ್ದಾರೆ.

ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡುವ ಮುನ್ನ ಹಲವು ಬಾರಿ ಯೋಚಿಸಬೇಕು. ಸಾಹಿತಿಗಳು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅವಲೋಕಿಸಿ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಯಾವುದೋ ಒಂದು ನಿರ್ಧಿಷ್ಟ ಘಟನೆಯನ್ನು ವಿರೋಧಿಸಿ ತಮ್ಮ ಸೇವೆಗೆ ಸಂದ ಗೌರವವನ್ನು ವಾಪಸ್ ನೀಡಬಾರದು ಎಂದರು.

ಅಸಹಿಷ್ಣುತೆ ಬಗ್ಗೆ ಸಾಹಿತಿಗಳಲ್ಲೇ ಪರ, ವಿರೋಧದ ನಿಲುವು ಇದೆ. ಸಹಿಷ್ಣುತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅಸಹಿಷ್ಣುತೆ ಬಗ್ಗೆ ಜನಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಪ್ರಶಸ್ತಿ ವಾಪಸ್ ಕೊಟ್ಟರೆ ಏನು ಪ್ರಯೋಜನ ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.

ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ದೇವನೂರು ಮಹಾದೇವ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದರು.

SCROLL FOR NEXT